ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು
ಶಹಾಪುರ: ತಾಲೂಕಿನ ಕೊಂಕಲ್ ಭೀಮಪ್ಪ ಹೈಯಾಳಪ್ಪ ಶಿರವಾರ ಇವರ ಸರ್ವೇ ನಂ 98ರಲ್ಲಿ ಲ್ಯಾಟ್ರಲ್ ಕಾಲುವೆ ಒಡಿದು ಹೊಲಕ್ಕೆ ನೀರು ನುಗ್ಗಿ ಬೆಳೆ ಹಾಳಾದ ಬಗ್ಗೆ ಕೆಬಿಜೆಎನ್ನೆಲ್ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ಬಡ ರೈತರ ಬಗ್ಗೆ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿರುವ ದಸಂಸ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದೆ.
ಸಮಿತಿ ಸಂಘಟನಾ ಜಿಲ್ಲಾ ಸಂಚಾಲಕ ಹೊನ್ನಪ್ಪ ಗಂಗನಾಳ ಮತ್ತಿತರರು, ಕೊಂಕಲ್‌ಭಾಗದ ನೀರು ನಿರ್ವಹಣೆ ಮೇಲ್ವಿಚಾರಕರ ನಿರ್ಲಕ್ಷ್ಯದ ವಿರುದ್ಧ ಮುಖ್ಯ ಎಂಜಿನಿಯರಿಗೆ ಮನವಿ ಸಲ್ಲಿಸಿ ರೈತರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ನೀರು ಬಳಕೆದಾರರ ಸಂಘಗಳು ನಿಷ್ಕ್ರಿಯವಾಗಿವೆ. ಕಾಮಗಾರಿ ನಿರ್ವಹಿಸದೆ ಹಣ ದುರುಪಯೋಗ ಪಡೆಸಿಕೊಂಡಿವೆ. ಪ್ರತಿವರ್ಷ ಕಾಲುವೆಯ ಹೆಚ್ಚಿನ ನೀರು ಹೊಲದೊಳಗೆ ನುಗ್ಗುತ್ತಿದೆ. ತಕ್ಷಣವೇ ಅಧಿಕಾರಿಗಳು ಸಂಬಂಧಿಸಿದ ರೈತನ ಹೊಲವನ್ನು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಿಗಮದ ಆಡಳಿತ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಸಮಿತಿಯ ಭೀಮರಾಯ ಸೈದಾಪುರ, ರಾಯಪ್ಪ ಗಂಗನಾಳ, ಮಲ್ಲಿಕಾರ್ಜುನ ಕೊಂಕಲ್, ಶರಣಪ್ಪ ಮಳ್ಳಳ್ಳಿ ತಿಳಿಸಿದ್ದಾರೆ.