ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖಾತ್ರಿ ಯೋಜನೆ ಸದುಪಯೋಗವಾಗಲಿ

Mainashree
Updated On : 18 Nov 2013, 11:03 am

ಕನ್ನಡಪ್ರಭ ವಾರ್ತೆ  ಶಹಾಪುರ  ನ.17
ಗ್ರಾಮೀಣ ಭಾಗದ ಜನತೆಯ ಆರ್ಥಿಕ ಸದೃಢತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಶಾಕಿರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹನುಮೇಗೌಡ ಮರ್ಕಲ್ ಹೇಳಿದರು.
  ಇಲ್ಲಿನ ಶಾಲಾ ಮೈದಾನ ಆವರಣದಲ್ಲಿ ಹೈಯಾಳ(ಬಿ) ವಲಯದ ಖಾತ್ರಿ ಯೋಜನೆಯ ವೈಯಕ್ತಿಕ ಹಾಗೂ ಸಾಮಾಜಿಕ ಕಾಮಗಾರಿಗಳ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯವರೆಗೂ ಸಾಮೂಹಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಖಾತ್ರಿ ಯೋಜನೆಯಡಿ ಹಲವು ಮಾರ್ಪಾಡು ಮಾಡಿಕೊಂಡು ಸಾಮೂಹಿಕ ಕಾಮಗಾರಿ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಲೂ ಅವಕಾಶ ನೀಡಲಾಗಿದೆ. ರೈತರು, ದುಡಿಯುವ ವರ್ಗದವರು ಯೋಜನೆ ಪ್ರಯೋಜನ ಪಡೆಯಬೇಕು ಎಂದರು.
  ವೈಯಕ್ತಿಕವಾಗಿ ಭೂ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ, ಎರೆಹುಳು ಸಾಕಣೆ, ರೇಷ್ಮೆ ನೀರಾವರಿ ಸೌಲಭ್ಯ, ಗಿಡ ನೆಡುವುದು ವೈಯಕ್ತಿಕ ಶೌಚಾಲಯಗಳ ಅವಕಾಶವಿದೆ. ಸಾಮೂಹಿಕವಾಗಿ ನಮ್ಮ ಹೊಲ ನಮ್ಮದಾರಿ, ರಾಶಿಕಣ, ಕೆರೆಗಳ ಪುನಶ್ಚೇತನ, ಗ್ರಾಮಗಳಲ್ಲಿ ಆಟದ ಮೈದಾನ, ರಸ್ತೆ ಬದಿಯಲ್ಲಿ ಗಿಡ ನೆಡುವುದು ಸೇರಿದಂತೆ ಹಲವಾರು ಕಾಮಗಾರಿಗಳನ್ನು ನಿರ್ವಹಿಸಬಹುದು. ಎನ್.ಎಂ.ಆರ್. ಮತ್ತು ಎಸ್ಟಿಮೇಟ್‌ಗೆ ಅಲೆಯದೆ ಸ್ಥಳದಲ್ಲೆ ಕಾರ್ಯಾದೇಶ ನೀಡುವ ಸರ್ಕಾರದ ಈ ವ್ಯವಸ್ಥೆಯ ಸದುಪಯೋಗ ಪಡೆಯಬೇಕು ಎಂದರು.
  ಜಿಪಂ ಸದಸ್ಯರಾದ ದೇವರಾಜ ನಾಯಕ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ  ಕೀಳರಿಮೆ ಭಾವನೆ ತಾಳದೆ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಿಕೊಂಡು ಪ್ರತಿಯೊಬ್ಬರು ಯೋಜನೆಯ ಲಾಭ ಪಡೆಯಬೇಕು ಎಂದರು.
 ಯೋಜನಾಧಿಕಾರಿ ಮಹ್ಮದ್ ಯೂಸಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಡಿ.ಡಿ. ವಡಿಯರ್ ಬ್ಯಾಂಕ್ ಖಾತೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
  ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಜಿಲಾನಿ, ಸದಸ್ಯರಾದ ನಾಗನಗೌಡ ಸುಬೇದಾರ, ಸಿದ್ದನಗೌಡ ಪೋಲಿಸ್ ಪಾಟೀಲ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಆರ್. ಪಾಟೀಲ, ಶರಣಪ್ಪ ದೇಸಾಯಿ, ನಿಂಗಣ್ಣಗೌಡ ಪೊಲೀಸ್ ಪಾಟೀಲ, ಶರಣಮ್ಮ ಶಾಂತಪ್ಪ, ಚನ್ನಮ್ಮ ಅಯ್ಯಣ್ಣ ಮಹಾಮನಿ, ಖಂಡಪ್ಪ ಮರಿಲಿಂಗಪ್ಪ, ಪಾರ್ವತಿ ದುರಗಪ್ಪಗೌಡ, ಮಲ್ಲಮ್ಮ ಬಸವರಾಜಗೌಡ, ಆಲಿಸೆಮ್ಮ ಭೀಮಶಪ್ಪ,  ಬಸವರಾಜ ಸುಣ್ಣದ, ಪುತ್ರಪ್ಪಗೌಡ, ಅಜಿತಕುಮಾರ, ಶರಣಪ್ಪ, ಗಿರಿಮಲ್ಲಣ್ಣ, ಅಕ್ಕನಾಗಮ್ಮ ಸೇರಿದಂತೆ ಗ್ರಾಮದ ಮುಖಂಡರು, ರೈತರು, ಗ್ರಾಪಂ ಸದಸ್ಯರು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಇಒ ನರಸಿಂಗರಾವ್ ಮುತಾಲಿಕ್ ಸ್ವಾಗತಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದುರ. ಶಿಕ್ಷಕ ಮನೋಹರ ನಿರ್ವಹಿಸಿದರು. ಸಿದ್ದಪ್ಪ ಹಳಿಗೋದಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement