ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂತೋಷವೇ ದೇವರ ಅನುಭವ: ಸಿದ್ದೇಶ್ವರ ಸ್ವಾಮಿಗಳು

Mainashree
Updated On : 18 Nov 2013, 11:03 am

ಶಹಾಪುರ: ಮನುಷ್ಯ ಇಲ್ಲದ ವಸ್ತುಗಳ ಬೆನ್ನು ಹತ್ತಿ ದಃಖವನ್ನು ತಂದು ಕೊಳ್ಳುತ್ತಿದ್ದಾನೆ. ನಾವು ಇಲ್ಲದ ಸತ್ಯವನ್ನು ಸೃಷ್ಟಿಸಿಕೊಂಡು ನಿಜವಿದ್ದ ಸತ್ಯವನ್ನು ತಿಳಿಯದೇ ಹೋಗುತ್ತೇವೆ. ಸಂತೋಷವೇ ದೇವರ ಅನುಭವವೆಂದು ವಿಜಾಪುರದ ಸಿದ್ದೇಶ್ವರ ಶ್ರೀ ಹೇಳಿದರು.
  ಪಟ್ಟಣದ ಫಕೀರೇಶ್ವರ ಮಠದ ನವೀಕೃತ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದರು. ಮನಸ್ಸಿನ ಮಾತುಗಳನ್ನು ಮೌನಕ್ಕೆ ಪರಿವರ್ತಿಸಬೇಕು. ಸತ್ಯ, ಪರಮ ಪ್ರೇಮಕ್ಕೆ ಅರಿವಿನ ಮಾರ್ಗ ತೋರಿಸಬೇಕು. ನಮಗೆ ಸಂತೋಷ, ಆನಂದ ಉಂಟಾಗಬೇಕಾದರೆ ಅಂದವಾದ ಮಹಾದ್ವಾರವನ್ನು ನೋಡುತ್ತ ನಿಂತಾಗ ದೇವರ ಅನುಭವ ಉಂಟಾಗುತ್ತದೆ ಎಂದರು.
  ವೇದಿಕೆಯಲ್ಲಿ ದೋರನಹಳ್ಳಿ ಹಿರೇಮಠದ ಶ್ರೀ, ಚರಬಸವೇಶ್ವರ ಗದ್ದುಗೆಯ ಬಸಯ್ಯ ಶರಣರು, ಏಕದಂಡಗಿ ಮಠದ ಕಾಳಹಸ್ತೇಂದ್ರ ಶ್ರೀ, ಮುಪ್ಪಿನ ಕಾಡಸಿದ್ದೇಶ್ವರ ಗಣೇರ, ಸೇಗುಣಸಿ ಶ್ರೀ, ಬಸವರಾಜೇಂದ್ರ ದೇಶಮುಖ, ಶಾಸಕ ಗುರು ಪಾಟೀಲ ಶಿರವಾಳ, ಮಲ್ಲಣ್ಣ ಮಡ್ಡಿ, ಚಂದ್ರಶೇಖರ ಆರಬೋಳ, ಸುರೇಂದ್ರ ಪಾಟೀಲ ಮಡ್ನಾಳ, ಡಾ. ಎಸ್.ಆರ್. ಶಿನ್ನೂರ, ಪವಡಯ್ಯಸ್ವಾಮಿ ಗಂಗಾಧರಮಠ, ರೇವಣಸಿದ್ದಪ್ಪ ಕಲ್ಬುಗರ್, ಸಿಪಿಐ ಜೆ.ಎಸ್. ನ್ಯಾಮೇಗೌಡ, ಬಸವರಾಜ, ಪರ್ವತರಡ್ಡಿ, ಸಿದ್ಲಿಂಗಣ್ಣ, ಬಸವರಾಜ, ಗುರುರಾಜ, ಶೀಲವಂತಪ್ಪ, ಮುನೆಪ್ಪಗೌಡ ಕೊಲ್ಲೂರ, ಮರೆಪ್ಪ ಹೈಯಾಳಕರ್, ಸಣ್ಣನಿಂಗಣ್ಣ, ಮಲ್ಲಿಕಾರ್ಜು ಚೌದ್ರಿ, ಸಿದ್ದಪ್ಪ ಸಾಹು ಖಿಣ್ಣಿ, ಉಮೇಶಗೋಗಿ, ಶೀಲವಂತಯ್ಯಸ್ವಾಮಿ ಹೇರೂರಮಠ, ಗುರುಮದ್ದೀನ್, ನಾಗಣ್ಣ ಸಾಹು, ಬಸವರಾಜ ಅರುಣಿ, ಚಂದ್ರಶೇಖರ ಆನೇಗುಂದಿ, ರುದ್ರಣ್ಣಚಟ್ರಿಕಿ, ಅಡಿವೆಪ್ಪಜಾಕಾ, ಬಸವರಾಜಪ್ಪಗೌಡ ಮಡ್ನಾಳ, ಅಶೋಕ ಉಪ್ಪಿನ್, ಶಿವಣ್ಣ ಇಜೇರಿ,  ಬಸವರಾಜಕೋರಿ ವಸಂತಕುಮಾರ ಸುರಪುರಕರ್, ಯಲ್ಲಯ್ಯ ನಾಯಕ ವನದುರ್ಗ, ಸಂಗಣ್ಣ ಮೋಟಗಿ, ವಿಶ್ವರಾಧ್ಯ, ನಾಗರಾಜ ನೂರಾರು ಜನ ಮಹಿಳೆಯರು ಭಾಗವಹಿಸಿದ್ದರು. ಸುಧೀರ ಚಿಂಚೋಳಿ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement