ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Mainashree
Updated On : 18 Nov 2013, 11:04 am

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ
ಶಹಾಪುರ: ಪಟ್ಟಣದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸರಸ್ವತಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪ್ರೌಢಶಾಲೆಯ ಪ್ರಾಚಾರ್ಯ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯರಾದ ನಿಂಗಣ್ಣ ಸಿಂಪಿ, ಜ್ಞಾನಾರ್ಜನೆಗಾಗಿ ಗ್ರಂಥಾಲಯವು ಅತ್ಯವಶ್ಯಕವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧತ್ಮಕ ಪರಿಕ್ಷೇಗಳನ್ನು ಸಮರ್ಪಕವಾಗಿ ಎದುರಿಸಲು ಗ್ರಂಥಾಲಯ ಸಹಾಯ ಪಡೆಯಬೇಕೆಂದು ಕರೆ ನೀಡಿದರು. ಗ್ರಂಥಾಲಯ ಮೇಲ್ವಿಚಾರಕರಾದ ಕಲ್ಯಾಣಪ್ಪ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಾಸುದೇವ ಕಟ್ಟಿಮನಿ ನ್ಯಾಯವಾದಿಗಳು, ಸಂಗಮೇಶ ರಸ್ತಾಪುರ, ಶಾಂತಗೌಡ ಉಮರದೊಡ್ಡಿ, ಮಲ್ಲಣ್ಣ ಬಸವಂತಪುರ, ಗುಲಾಂರಬ್ಬಾನಿ, ಓದುಗರಾದ ಮಹೇಶಕೊದ್ದಡ್ಡಿ, ಸುಭಾಸ ತೋಟದ, ಕಾರ್ತಿಕ ರುದ್ರಪುರ ಮಠ ಇದ್ದರು. ಚಂದ್ರಗಿರಿ ವಂದಿಸಿದರು.
ಲಕ್ಷ್ಮಿ Þ ತಿಮ್ಮಪ್ಪ ಜಾತ್ರೆ; ಸಾಮೂಹಿಕ ವಿವಾಹ
ಗುರುಮಠಕಲ್: ಯಾದಗಿರಿ ತಾಲೂಕಿನ ಗುರುಮಠಕಲ್ ಪಟ್ಟಣದಿಂದ ಕೇವಲ 5 ಕಿಮೀ ಅಂತರದಲ್ಲಿರುವ ಬೋರಬಂಡಾ ಗ್ರಾಮದ ಗುಡ್ಡದಲ್ಲಿ ನಿಸರ್ಗದ ನಡುವೆ ನೆಲೆಸಿರುವ ಲಕ್ಷ್ಮೀ ತಿಮ್ಮಪ್ಪ ಜಾತ್ರೆಯು ಸಂಭ್ರಮದ ನಡುವೆ ಜರುಗಿತು. ತಿರುಪತಿಗೆ ಹೋಗಲಾಗದವರೆಲ್ಲಾ ತಿಮ್ಮಪ್ಪ ನೀನೇ ತಿರುಪತಿ ವೆಂಟಕರಮಣ, ನಮ್ಮ ಸಂಕಟಗಳನ್ನೆಲ್ಲಾ ದೂರ ಮಾಡು ತಂದೆ ಎಂದು ಬೇಡುತ್ತಾರೆ. ಇಲ್ಲಿನ ದೇವರು ಎಂದೂ ಕೈಬಿಟ್ಟಿಲ್ಲ ಎಂದು ಭಕ್ತ ನರೇಂದ್ರ ರಾಠೋಡ ಹೇಳುತ್ತಾರೆ. ತೊಂದರೆಯಲ್ಲಿರುವವರಿಗೆ ಗುರುಮಠಕಲ್ ಹತ್ತಿರ ಲಕ್ಷ್ಮೀತಿಪ್ಪನ ದೇವಸ್ಥಾನವಿದೆ. ಅಲ್ಲಿಗೆ ಹೋಗಿ. ನಿಮ್ಮ ಸಂಕಷ್ಟಗಳೆಲ್ಲಾ ದೂರ ಆಗುತ್ತವೆ ಎಂದು ಸಂಬಂಧಿಕರಿಂದ ಕೇಳಿ, ಇಲ್ಲಿ ದರ್ಶನ ಪಡೆದು ಕಷ್ಟಗಳು ಪರಿಹಾರಗೊಂಡವು ಎಂದು ಹೈದರಾಬಾದಿಂದ ಬಂದಿದ್ದ ಭಕ್ತರೊಬ್ಬರು ಹೇಳಿದರು. 15ರಂದು ಸ.6ಕ್ಕೆ ಕಾರ್ತಿಕ ದೀಪೋತ್ಸವ, ರಾತ್ರಿ 9ರಿಂದ 11ಕ್ಕೆ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ನಂತರ 2 ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮ ನಡೆಯಿತು.  ಗ್ರಾಮೀಣ ಸ್ಪರ್ಧೆ ಕುಸ್ತಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿದ್ದಾರೂಢ ಸಂಸ್ಥಾನದ ಸಿದ್ದಲಿಂಗಶ್ರೀ ಭಾಗವಹಿಸಿ ವಧು-ವರರನ್ನು ಆಶೀರ್ವವದಿಸಿದರು. ನರೇಂದ್ರ ರಾಠೋಡ, ಅರ್ಚಕರಾದ ಬೋರಬಂಡ ಸೇರಿ ಭಕ್ತ ಸಮೂಹ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement