ಇಂದು ಸಾಂಸ್ಕೃತಿಕ ಕಾರ್ಯಕ್ರಮ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದಲ್ಲಿ 2 ದಶಕಗಳಿಂದ ಸಂಘಟನೆ, ಹೋರಾಟ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಎಐಡಿಎಸ್ಒ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹನುಮಾನ ನಗರದಲ್ಲಿ ನ.20ರಂದು ಬೆಳಗ್ಗೆ 10.30ಕ್ಕೆ ಒಂದು ದಿನದ ವಿದ್ಯಾರ್ಥಿ ಶಿಬಿರ ನಡೆಸುತ್ತಿದ್ದು, ಈ ಶಿಬಿರದಲ್ಲಿ ವಿದ್ಯಾರ್ಥಿಗಳ ಅಭಿರುಚಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ವೇದಿಕೆ ಕಲ್ಪಿಸಲಾಗುವುದು. ಶೈಕ್ಷಣಿಕ, ಸಾಮಾಜಿಕ ವಿಷಯ ಕುರಿತು ಚರ್ಚೆ, ಚಿತ್ರಕಲೆ, ಸಮೂಹ ಗಾಯನ, ಪವಾಡ ರಹಸ್ಯ ಬಯಲು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಶಿಬಿರದ ಒಂದು ದಿನದ ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಶಿಬಿರದ ಸದುಪಯೋಗ ಪಡೆಯಬಹುದು.