ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹ

Rashmi Kasaragodu
Updated On : 19 Nov 2013, 12:02 pm

ಯಾದಗಿರಿ: ರಾಜ್ಯದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಏಕರೂಪ ಸಮಾನ ಶಿಕ್ಷಣ ನೀತಿ ತರಲು ಒತ್ತಾಯಿಸಿ, ನಗರದಲ್ಲಿ ಜಯ ಕರ್ನಾಟಕ ತೇಜ್ರಾಜ್ ರೋಠೋಡ್ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಜಾಗೃತಿ ಜನಾಂದೋಲನ ಹಮ್ಮಿಕೊಳ್ಳಲಾಗಿತ್ತು.
ನಗರದ ಮೈಲಾಪುರ ಅಗಸೆಯಿಂದ ಪ್ರಾರಂಭವಾದ ಮೆರವಣಿಗೆ ಗಾಂಧಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ತೇಜರಾಜ್ ಮಾತನಾಡಿ, ಶಿಕ್ಷಣ ಮೂಲಭೂತ ಹಕ್ಕಾಗಿದ್ದರೂ ನಮ್ಮ ಶಿಕ್ಷಣ ಪದ್ಧತಿ ಅಸಮಾನತೆ ಹಾಗೂ ತಾರತಮ್ಯದ ಪ್ರತಿರೂಪವಾಗಿದೆ. ಇಲ್ಲಿ ಬಡ ಮಕ್ಕಳು ಮಾತೃ ಭಾಷಾ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ಶ್ರೀಮಂತ ಮಕ್ಕಳು ಆಂಗ್ಲ ಭಾಷಾ ಮಾಧ್ಯಮದಲ್ಲಿ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇದು ವಿಷಾದದ ಸಂಗತಿ. ಶಿಕ್ಷಣ ಮಾರಾಟದ ವಸ್ತುವಾಗಿ, ಖಾಸಗಿಕರಣಗೊಳ್ಳುತ್ತಿರುವುದು ದುರಂತ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆ ರಾಜಾಧ್ಯಕ್ಷ ವೀರಣ್ಣ ಎಂ. ಕೋರಳಿ, ವಿಜಯಕುಮಾರ ಕವಲೂರ, ಈಶಪ್ಪ ನಾಯಕ, ವೆಂಕಟೇಶ ರೆಡ್ಡಿ, ಅಣ್ಣಪ್ಪ ಓಲೇಕಾರ, ನೀಲಮ್ಮ ಪಾಟೀಲ್, ವಿಶ್ವನಾಥ ನಾಯಕ, ದುರ್ಗಯ್ಯ ವಿಜಯಕುಮಾರ ಮಗಧಂಪುರ, ಫರೋಜ ಪಟೇಲ್, ಅಬ್ದುಲ್ ಪಟೇಲ್, ನಾಗರಾಜ ಯಲ್ಲೂ ಪೂಜಾರಿ, ದೀಪಕ್ ಸೇರಿದಂತೆ ಕಾರ್ಯಕರ್ತರು ಇದ್ದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement