ಕರಾಟೆ ಸ್ಕೂಲ್ ವಿದ್ಯಾರ್ಥಿಗಳಿಗೆ ತೆಲಂಗಾಣ ಕಪ್
ಶಹಾಪುರ: ಆಲ್ ಇಂಡಿಯಾ ಚಾಂಪಿಯನ್ ಶಿಪ್ ಸ್ಪರ್ಧೆ ಇತ್ತೀಚೆಗೆ ಆಂಧ್ರದ ಮೈಬೂಬ್ ನಗರದಲ್ಲಿ ನಡೆಯಿತು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೆ.ಆರ್. ಬುಡಕಾನ್ ಕರ್ನಾಟಕ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕರಾಟೆ ಶಿಕ್ಷಕ ಹುಸೇನ್ ಬಾಷಾ ಮುದವಾಳ.ಬಿ. ಮಾರ್ಗದರ್ಶನದಲ್ಲಿ ವಿದ್ಯಾಥಿಗಳಾದ ದಾವಲಸಾಬ್ ಚೌದ್ರಿ ಮೂರು ಪದಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿ ವಿಜೇತರಾದರು. ಮರೆಪ್ಪ ಶಿಳ್ಯೆಖ್ಯಾತ, ಇರಫಾನ, ಸುನಿಲ್, ಪ್ರಶಾಂತ, ತಲಾ ಎರಡು ಪದಕ ಪಡೆದರು. ಯಾಸೀನ್ಗೆ ಒಂದು, ಮಹ್ಮದ್ಗೆ, ಸಿಂಹಾದ್ರಿ ಹೊಸಮನಿ ಪ್ರಥಮ ಸ್ಥಾನ ಪಡೆದರು.
ವಿಜೇತರಿಗೆ ಪಟ್ಟಣದ ಬಸ್ ಡಿಪೋ ಹಿಂದೆ ಇರುವ ಆಶ್ರಯ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪದಕ ವಿತರಣೆ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಅಲೆಮಾರಿ ಸಮುದಾಯದ ಪ್ರಮುಖರಾದ ಬಾಬುರಾವ್ ರಾಂಪುರ, ಮುಖ್ಯ ಅತಿಥಿಗಳಾಗಿ ಅಲೆಮಾರಿ ಸಮುದಾಯದ ಅಧ್ಯಕ್ಷ ಯಲ್ಲಪ್ಪ ಬಜಂತ್ರಿ, ಕೊರಮ ಸಮಾಜದ ಅಧ್ಯಕ್ಷ ಲಕ್ಷ್ಮಣ ಕೊರಮ, ದಲಿತ ಮುಖಂಡ ತಾಯಪ್ಪ ಶಿಳ್ಯಾಖ್ಯಾತ, ಸಮಾಜ ಕಾರ್ಯದರ್ಶಿ ವೆಂಕಟೇಶ, ನಾಗಪ್ಪ ಕೊರಮ ಎಸ್ಡಿಎಂಸಿ ಸದಸ್ಯ ದುರ್ಗಪ್ಪ ಮತ್ತಿತರರಿದ್ದರು.