ಕಾಮಗಾರಿಗೆ 12 ಕೋಟಿ ಮಂಜೂರು
ಕನ್ನಡಪ್ರಭ ವಾರ್ತೆ ಟಿ ಚಿಂಚೋಳಿ ಟಿ ನ.18
ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿಯಲ್ಲಿ ತಾಲೂಕಿಗೆ ಶಾಲಾ ಕೋಣೆ ವಸತಿ ನಿಲಯ ಹಾಗೂ ಇನ್ನಿತರ ಕಟ್ಟಡಗಳ ನಿರ್ಮಾಣಕ್ಕಾಗಿ ಒಟ್ಟು 12 ಕೋಟಿ ಮಂಜೂರಾಗಿದೆ ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದರು.
ತಾಲೂಕಿನ ಕೋಡ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಮಂಜೂರಾದ 3 ಶಾಲಾ ಕೋಣೆ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ರುಮ್ಮನಗೂಡ, ಕೋಡ್ಲಿ, ಕನಕಪುರ, ಹೂವಿನಬಾವಿ, ಸಾಲೇಬೀರನಳ್ಳಿ ಪ್ರೌಢಶಾಲೆ ಮತ್ತು ಚಿಂಚೋಳಿ ಕನ್ಯಾ, ಚಿಂಚೋಳಿ ಸರ್ಕಾರಿ ಬಾಲಕರ ಪಪೂ ಕಾಲೇಜು ಆವರಣದಲ್ಲಿ ಹೆಚ್ಚುವರಿ ಶಾಲಾ ಕೋಣೆ ನಿರ್ಮಾಣ ಹಾಗೂ ಪೋಲಕಪಳ್ಳಿ ಗ್ರಾಮದ ಹತ್ತಿರ ಆದರ್ಶ ವಿದ್ಯಾಲಯ ನೂತನ ಕಟ್ಟಡ ನಿರ್ಮಾಣ ಮತ್ತು ಬಾಲಕಿಯ ವಸತಿ ನಿಲಯ ನಿರ್ಮಾಣ ನಡೆಯಲಿವೆ ಎಂದರು.
ಉತ್ತಮ ಶಿಕ್ಷಣ ನೀಡುವ ಉದ್ದೇಶ: ತಾಲೂಕಿನಲ್ಲಿ ಎಲ್ಲ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಮುಖ್ಯ ಉದ್ದೇಶವಾಗಿದೆ. ಶಾಲಾ ಕೋಣೆಗಳ ಕೊರತೆಯನ್ನು ನೀಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಶಾಲಾ ಕೋಣೆ ನಿರ್ಮಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ರೇಣುಕಾ ರಾಠೋಡ, ತಾಪಂ ಸದಸ್ಯ ಗುಂಡಪ್ಪ ಮಾಳಗಿ, ಕೋಡ್ಲಿ ಗ್ರಾಪಂ ಅಧ್ಯಕ್ಷ ಹಣಮಂತರಾವ ಭೋವಿ, ಮಲ್ಲಿಕಾರ್ಜುನ ಸುಲೇಪೇಟ್, ವೀರಣ್ಣ, ಡಾ. ತುಕಾರಾಮ ಪವಾರ, ಕಾಂಗ್ರೆಸ್ ಮುಖಂಡ ಮಾರುತಿ ಜಮಾದಾರ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಅನೀಲಕುಮಾರ್ ಜಮಾದಾರ, ಶಬ್ಬೀರಮಿಯ್ಯ ಸೌದಾಗರ, ಅಲೀಮ ನಾಯಕೋಡಿ, ಮಲ್ಲಿನಾಥರೆಡ್ಡಿ, ರಮಾಕಾಂತ ದೇಸಾಯಿ, ಭರತ ಬುಳ್ಳಾ, ಮರೆಪ್ಪ ಬುಳ್ಳಾ, ಶಾಲಾ ಮಕ್ಕಳು ಶಿಕ್ಷಕರು ಮತ್ತು ಎಸ್ಡಿಎಂಸಿ ಸದಸ್ಯರು ಭಾಗವಹಿಸಿದ್ದರು. ಮುಖ್ಯಗುರು ಮಹಾದೇವಪ್ಪ ಸ್ವಾಗತಿಸಿದರು.