ಕುಡಿಯುವ ನೀರಿನ ಬವಣೆ: ಆರೋಪ
ಶಹಾಪುರ: ಪಟ್ಟಣದ ದೇವಿನಗರ ಬುದ್ಧ ನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಪೈಪು ಒಡೆದು ಅದರಲ್ಲಿ ಚರಂಡಿ ನೀರು ಕಲಬೆರಕೆಯಾಗುತ್ತಿದ್ದರೂ, ಪುರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ವೆಂಕಟೇಶ ಆಲೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಡ್ರೈನೇಜ್ಗಳು ತುಂಬಿ ಹೋಗಿವೆ. ಪುರಸಭೆಯವರು ಈ ಕುರಿತು ತಕ್ಷಣವೇ ಸ್ಪಂದಿಸಬೇಕು. ಬಡಾವಣೆ ಜನತೆಗೆ ಹಲವು ಸಾಂಕ್ರಾಮಿಕ ರೋಗಗಳಿಗೆ ಹರಡುವ ಭೀತಿ ಇದ್ದು, ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ಹೋರಾಟ ಅನಿವಾರ್ಯವೆಂದು ರಾಜ್ಯ ಮಾದಿಗ ದಂಡೋರಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಆಲೂರ ತಿಳಿಸಿದ್ದಾರೆ.