ಕ್ಷೇತ್ರದ ಜನಸೇವೆಯೇ ನನ್ನ ಗುರಿ: ಮಾಜಿ ಸಚಿವ ರಾಜುಗೌಡ
ಸುರಪುರ: ರಾಜಕೀಯದಲ್ಲಿ ಸೋಲು-ಗೆಲವು ಸಾಮಾನ್ಯ. ಸೋಲನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಸೋಲಿನಿಂದ ಕುಗ್ಗಿಲ್ಲ. ಅಧಿಕಾರಕ್ಕಿಂತ ಜನಸೇವೆಯ ನನ್ನ ಗುರಿ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.
ತಾಲೂಕಿನ ದೇವಿಕೇರಾ ಗ್ರಾಮದ ಹಜರತ್ ಸೈಯದ್ ದಾವುಲ್ ಮಲ್ಲಿಕ್ ದರ್ಗಾದ ದಾಸೋಹ ಕೋಣೆಯನ್ನು ಮಾಜಿ ಸಚಿವ ರಾಜೂಗೌಡ ಉದ್ಘಾಟಿಸಿ ಮಾತನಾಡಿ, ಅಧಿಕಾರದಲ್ಲಿದ್ದಾಗ ಸೇವೆ ಮಾಡುವುದಕ್ಕಿಂತಲೂ ಅಧಿಕಾರವಿಲ್ಲದಾಗ ಸೇವೆ ಮಾಡುವುದು ಮಹತ್ವದ್ದು ಎಂದು ಭಾವಿಸಿದ್ದೇನೆ. ಕಾರಣ ಜನಸೇವೆಗೆ ತಾವು ಸದಾ ಬದ್ಧರಾಗಿರುವುದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಜಡಿಮರಳ್, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ) ಮತ್ತು ತಾಪಂ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಮಾತನಾಡಿದರು.
ದರ್ಗಾದ ಸಜ್ಜಾದ್ ಹಜರತ್ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯರಾದ ಭೀಮಾಶಂಕರ ಬಿಲ್ಲವ್, ವೆಂಕಟೇಶ ಅಲ್ಟಿ, ಪ್ರಕಾಶ ಗುತ್ತೇದಾರ್, ಎಸ್.ಎನ್. ಪಾಟೀಲ್, ದುರ್ಗಪ್ಪ ಗೋಗಿಕೇರಾ, ಬಲಭೀಮನಾಯಕ ಬೈರಿಮಡ್ಡಿ, ಸಿದ್ದಣ್ಣಗೌಡ ಕರಿಬಾವಿ, ಶ್ರೀರಂಗ ಮಿರಿಯಾಲ್, ಉಸ್ಮಾನ್ ಅಲಾತೆ, ಹಣಮಂತ್ರಾಯ ಇದ್ದರು.