ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಹಸೀಲ್ದಾರ್ ಮಧ್ಯಸ್ಥಿಕೆ; ಶವಸಂಸ್ಕಾರ

Rashmi Kasaragodu
Updated On : 19 Nov 2013, 12:00 pm

ಕನ್ನಡಪ್ರಭ ವಾರ್ತೆ ಟಿ ಆಳಂದ ಟಿ ನ.18
ತಾಲೂಕಿನ ಎಲೆನಾವದಗಿ ದಲಿತರಿಗೆ ಸರ್ಕಾರಿ ಸ್ಮಶಾನ ಭೂಮಿ ಕೊರತೆಯಾದ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಮನೆಯಲ್ಲೇ ದಿನವಿಡೀ ಇಟ್ಟುಕೊಂಡ ಭಾನುವಾರ ಪ್ರಸಂಗ ನಡೆದಿದೆ.
ಈ ಸುದ್ದಿ ಅರಿತು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ, ಎರಡೂ ಗುಂಪಿನವರಿಗೆ ಸಮಾಧಾನಪಡಿಸಿದ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ದಲಿತ ಸೇನೆ ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಮಾತನಾಡಿ, ಗ್ರಾಮದ ದಲಿತ ಜನಾಂಗಕ್ಕೆ ಶವಸಂಸ್ಕಾರ ಕೈಗೊಳ್ಳಲು ಶಾಶ್ವತವಾದ ಸ್ಮಶಾನಭೂಮಿ ಒದಗಿಸಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ಕೈಗೊಳ್ಳಲು ಅಡ್ಡಿಯುಂಟಾಗಿದೆ. ಗ್ರಾಮದ ದಲಿತ ಬಡಾವಣೆಯಲ್ಲಿ ಯಾರೇ ಮೃತಪಟ್ಟರೂ ಶವವನ್ನು ಮನೆಯಲ್ಲೇ ದಿನವಿಡೀ ಇಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಪ್ರತಿಬಾರಿ ಅಧಿಕಾರಿಗಳು ಬಂದು ಶವಸಂಸ್ಕಾರ ಮಾಡಿಸುಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.16ರಂದು ಸಭೆ?: ಗ್ರಾಮದ ಗ್ರಾಪಂ ಸದಸ್ಯ ಪರಮೇಶ್ವರ ಪರಿಟ್ ಮಾತನಾಡಿ, ಇಂಥ ಸಮಸ್ಯೆ ಮುಂದುವರಿಸದೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಹಿಂದಿನಿಂದಲೂ ಶವಸಂಸ್ಕಾರ ಕೈಗೊಳ್ಳುತ್ತಾ ಬಂದಿರುವ 20 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಹಂತದಲ್ಲಿದೆ. ಜಮೀನು ಮಾಲೀಕರ ಒಪ್ಪಿಗೆ ಇಲ್ಲದಿದ್ದಲ್ಲಿ ಗುಲ್ಬರ್ಗ ಸಹಾಯಕ ಆಯುಕ್ತರ ಬಳಿ ಡಿ.16ರೊಳಗೆ ಚರ್ಚಿಸಲು ಎರಡೂ ಕಡೆಯವರಿಗೆ ಸಭೆ ಕರೆಯಲಾಗುವುದು ಎಂದು ಲಿಖಿತವಾಗಿ ಭರವಸೆ ನೀಡಿದ ತಹಸೀಲ್ದಾರರು, ಎಲ್ಲರೂ ತಾಳ್ಮೆಯಿಂದ ನಡೆದುಕೊಂಡು ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು. ಶಿರಸ್ತೇದಾರ ಶರಣಪ್ಪ, ಗ್ರಾಮ ಲೇಖಪಾಲಕ ಸುಭಾಷ, ದಲಿತ ಸೇನೆ ಮುಖಂಡ ಧರ್ಮಾ ಬಂಗರಗಾ, ಶರಣು ಕವಲಗಾ, ಬಾಬು, ರಾಜು ಸುತಾರ, ಚಂದ್ರಕಾಂತ ಬೋಧನ, ಬಸಣ್ಣ ಪೋಳ್ಳೆ ಉಪಸ್ಥಿತರಿದ್ದರು. ನರೋಣ ಪಿಎಸ್ಐ ಮಾನಯ್ಯಾ ದೊರೆ ಸೇರಿದಂತೆ ಆಳಂದ ಮತ್ತು ನರೋಣಾ ಪೊಲೀಸ್ ಸಿಬ್ಬಂದಿ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement