ನೂತನ ಜವಳಿ ನೀತಿ; 10 ಸಾವಿರ ಕೋಟಿ ಬಂಡವಾಳ ಆಕರ್ಷಣೆ ಗುರಿ
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ನ.18
ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ 2013- 14ನೇ ಸಾಲಿನಿಂದ ಬರುವ 5 ವರ್ಷಗಳ ಅವಧಿಗಾಗಿ ಜವಳಿ ನೀತಿ ಜಾರಿಗೊಳಿಸಿದೆ. ಈ ನೀತಿಯಂತೆ 5 ವರ್ಷಗಳಲ್ಲಿ 1 ಸಾವಿರ ಕೋಟಿ ಆಯವ್ಯಯ ಅನುದಾನ, 10 ಸಾವಿರ ಕೋಟಿ ಬಂಡವಾಳ ಆಕರ್ಷಿಸುವ ಹಾಗೂ 5 ಲಕ್ಷ ಜನರಿಗೆ ಉದ್ಯೋಗವಕಾಶ ಒದಗಿಸುವ ನೀತಿ ಇದಾಗಿದೆ.
ಇಂದಿಲ್ಲಿ ಜವಳಿ ಸಚಿವ ಬಾಬೂರಾವ್ ಚಿಂಚನ್ಸೂರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯವನ್ನು ಈ ನೀತಿಯಡಿ ಜವಳಿ ವಲಯವನ್ನಾಗಿಸುವ ಯೋಜನೆ ಇದೆ. ಇದಲ್ಲದೆ ಚೈನಾ, ಹಾಂಗ್ಕಾಂಗ್ ದೇಶಗಳ ಸಹಕಾರದೊಂದಿಗೆ ಯಾದಗಿರಿಯಲ್ಲಿ 3,500 ಎಕರೆ ಭೂಮಿಯಲ್ಲಿ 10 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಅಂತರರಾಷ್ಟ್ರೀಯ ಜವಳಿ ಪಾರ್ಕ್ ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.
ನೂತನ ಜವಳಿ ನೀತಿಯಲ್ಲಿ ರಾಜ್ಯವನ್ನು ಹಿಂದುಳಿದ ಜಿಲ್ಲೆಗಳು, ಜವಳಿ ಮೌಲ್ಯ ಚಟುವಟಿಕೆಗಳ ಮುಂದುವರಿದ ಜಿಲ್ಲೆಗಳು ಹಾಗೂ ಆನೇಕಲ್ ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳೆಂದು ಮೂರು ವಲಯಗಳನ್ನಾಗಿ ಮಾಡಲಾಗಿದೆ.
ಜವಳಿ ನೀತಿ ವೈಶಿಷ್ಟ ್ಯಗಳು: ಜವಳಿ ನೂತನ ನೀತಿ ಇತಿಹಾಸ ಸೃಷ್ಟಿಸಲಿದೆ. ಸಿಎಂ ಸಿದ್ದರಾಮಯ್ಯ ಅವರ ಚೀನಾ ಪ್ರವಾಸದ ಹಿನ್ನೆಲೆಯಲ್ಲಿನ ಚರ್ಚಿತ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡೇ ಜವಳಿ ನೀತಿ ರೂಪಿತವಾಗಿದೆ ಎಂದು ಬಾಬೂರಾವ್ ಚಿಂಚನ್ಸೂರ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜವಳಿ ಪಾರ್ಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 900 ಎಕರೆ ಭೂಮಿ ಸ್ವಾಧೀನ ಕಾರ್ರ್ಯವಾಗಿದೆ. ಇನ್ನೂ ಉಳಿದ ಭೂಸ್ವಾಧೀನಕ್ಕೆ ಪ್ರಕ್ರಿಯೆ ಮುಂದುವರಿದಿದೆ. 10 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಯಾದಗಿರಿ ಪಾರ್ಕ್ನಲ್ಲಿ ಹೂಡಿಕೆಯಾಗಲಿದೆ. 25 ಸಾವಿರ ಯುವಕರಿಗೆ ಉದ್ಯೋಗ ದೊರಕಲಿದೆ ಎಂದು ಸಚಿವ ಚಿಂಚನ್ಸೂರ್ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ದೇಶಿ ನೇಕಾರಿಕೆಗೆ ಇಲಾಖೆಯಿಂದ ಹೆಚ್ಚಿನ ಸವಲತ್ತುಗಳು ಈಗಾಗಲೇ ನೀಡಲಾಗುತ್ತಿದೆ. ನೇಕಾರರ ಸಾಲಮನ್ನಾ ಮಾಡಲಾಗಿದೆ. ಅವರಿಗೆ ಕಚ್ಚಾ ಸಾಮಗ್ರಿ ಒದಗಿಸುವುದು ಮತ್ತು ಅವರು ನೇಯ್ದ ಬಟ್ಟೆ ಖರೀದಿಗೂ ಕ್ರಮಗಳನ್ನು ಕೈಗೊಲ್ಳಲಾಗುತ್ತಿದೆ ಎಂದರು.
ಟ ಬಂಡವಾಳ ಸಹಾಯಧನ, ಬಡ್ಡಿ ಸಹಾಯಧನ ಜವಳಿ ಕೈಗಾರಿಕೆಗಳಿಗೆ ಒದಗಿಸುವುದು
ಟ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರಿಗೆ ಬಡ್ಡಿ ಸಹಾಯಧನ ಒದಗಿಸುವುದು
ಟ ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಬಂಡವಾಳ ಸಹಾಯಧನ
ಟ 10 ಕೋಟಿಯಿಂದ 99 ಕೋಟಿವರೆಗಿನ ಬಂಡವಾಳ ಹೂಡಿಕೆ ಘಟಕಗಳಿಗೆ ಶೇ.15ರಿಂದ ಶೇ.20 ರವರೆಗೆ ಗರಿಷ್ಠ 6 ಕೋಟಿವರೆಗೆ ಸಹಾಯಧನ
ಟ ಎಸ್ಸಿ-ಎಸ್ಟಿ ಉದ್ದಿಮೆದಾರರಿಗೆ ಶೇ.20ರಷ್ಟು, ಅಲ್ಪಸಂಖ್ಯಾತ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ ಉದ್ದಿಮೆದಾರರಿಗೆ ಶೇ.5 ರಷ್ಟು ಹೆಚ್ಚುವರಿ ಸಹಾಯಧನ.
ವಿಶೇಷ ಸಾಲ ಆಧರಿತ ಬಂಡವಾಳ ಸಹಾಯಧನ
ಜವಳಿ ಘಟಕಗಳಿಗೆ ಸ್ಥಾವರ, ಯಂತ್ರೋಪಕರಣಗಳ ಮೌಲ್ಯದ ಮೇಲೆ ಶೇ.10ರಷ್ಟು ಗರಿಷ್ಠ 25 ಲಕ್ಷ ಸಹಾಯಧನ
ಸಮಗ್ರ ಜವಳಿ ಘಟಕಗಳಿಗೆ ಶೇ.30ರಷ್ಟು ಸಹಾಯಧನ
ಶೇ.100 ರಷ್ಟು ಪ್ರವೇಶ ತೆರಿಗೆ ಸಹಾಯಧನ
ತ್ಯಾಜ್ಯ ವಿಲೇವಾರಿ ಘಟಕ, ದ್ರವ್ಯೋಪಚಾರ ಘಟಕಗಳಿಗೂ ಸಹಾಯಧನ
ನೀತಿಯಡಿ ಸ್ಥಾಪಿತವಾಗುವ ಎಲ್ಲಾ ಕೈಗಾರಿಕೆಗಳಿಗೆ ಪ್ರತಿ ಯೂನಿಟ್ಗೆ 1 ವಿದ್ಯುತ್ ಸಹಾಯಧನ
ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ಕೇಂದ್ರಗಳಲ್ಲಿ ತರಬೇತಿ
ಗ್ರೀನ್, ಬ್ರೌನ್ ಫೀಲ್ಡ್ ಎಂದು ಪಾರ್ಕ್ಗಳ ವಿಂಗಡಣೆ
ತಾಂತ್ರಿಕ ಜವಳಿ ವಲಯಕ್ಕೆ ಹೆಚ್ಚಿನ ಆದ್ಯತೆ
ಜವಳಿ ವಲಯ ಪ್ರಗತಿಗೆ 10 ಕೋಟಿ ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲನ್ಸ್ ಸ್ಥಾಪನೆ
3 ಲಕ್ಷ ನಿರುದ್ಯೋಗಿಗಳಿಗೆ ತರಬೇತಿ