ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಾರತ ಜಾತಿ ನಿರಪೇಕ್ಷ ರಾಷ್ಟ್ರವಾಗಲಿ

Rashmi Kasaragodu
Updated On : 19 Nov 2013, 12:00 pm

ಗುಲ್ಬರ್ಗ/ಶಹಾಬಾದ್: ಧರ್ಮಗಳು ಪರರ ಪ್ರೀತಿಯಲ್ಲಿ, ಪರರ ಒಳಿತನ್ನು ಬಯಸುವುದಾಗಿದೆ, ನಮ್ಮಲ್ಲಿ ಧರ್ಮ ಬೇಕು. ಆದರೆ ಜಾತಿ ಇರಬಾರದು. ಅದಕ್ಕಾಗಿ ನಮ್ಮ ದೇಶ ಧರ್ಮ ನಿರಪೇಕ್ಷತೆ ರಾಷ್ಟ್ರ ಎಂಬುದಕ್ಕೆ ಸ್ವಲ್ಪ ತಿದ್ದುಪಡಿ ಮಾಡಿ ಜಾತಿ ನಿರಪೇಕ್ಷತೆ ರಾಷ್ಟ್ರ ಎಂದಾಗಬೇಕೆಂದು ಗುಲ್ಬರ್ಗದ ಸೇಂಟ್ ಮೇರಿ ಕಾಲೇಜಿನ ಪ್ರಾಚಾರ್ಯ ಅನೀಲ್ ಪ್ರಸಾದ ಹೇಳಿದರು.
ನಗರದ ಲಕ್ಷ್ಮೀ ಗಂಜ್ ಪ್ರದೇಶದಲ್ಲಿರುವ ಸೇಂಟ್ ತೋಮಾಸ್ ಚರ್ಚ್ನ ಸುವರ್ಣ ಮಹೋತ್ಸವದಲ್ಲಿ ಮಾತನಾಡಿ, ಏಸು ಸ್ವಾಮಿ ಸೇವಾ ದೀಕ್ಷೆ ಸಂದರ್ಭದಲ್ಲಿ ತನ್ನ ಶಿಷ್ಯರ ಪಾದವನ್ನು ತೊಳೆದು ಮುತ್ತಿಟ್ಟ ನೆನೆಪಿಗಾಗಿ ಆಸ್ಪತ್ರೆ, ಆಶ್ರಮಗಳಲ್ಲಿ ಸೇವಾ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.
ಎಲ್ಲರನ್ನೂ ಪ್ರೀತಿಸು..: ಮುಸ್ಲಿಂ ಧರ್ಮ ಗುರು ಮುಫ್ತಿ ಮಹ್ಮದ್ ಅಹ್ಮದ್ ಅಲಿ ಚರದೆ ಮಾತನಾಡಿ, ದೇವರು ಎಲ್ಲ ಮಾನವರಿಗೂ ಪ್ರೀತಿಯಿಂದ ಒಳ್ಳೆಯ ಬದುಕನ್ನು ಬದುಕಲು ಹೇಳಿದ್ದಾನೆ. ನಮ್ಮ ಮನೆಯವರಂತೆ, ನಮ್ಮ ಮನೆಯ ಪಕ್ಕದವರನ್ನು ಪ್ರೀತಿಸು, ನಮ್ಮಿಂದ ಇನ್ನೊಬ್ಬರಿಗೆ ದುಃಖವಾಗದಿರಲಿ ಎಂದರು.
ಗುಲ್ಬರ್ಗ ಬುದ್ಧವಿಹಾರದ ಸಂಗಪಾಲ್ ಬಂತೇಜಿ, ಮೆಥೋಡಿಸ್ಟ್ ಚರ್ಚ್ನ ಗುರುಗಳಾದ ಬೆಂಜಮೀನ್ ಥೀಮಟೆ, ಮಾಜಿ ಸಚಿವ ಸಿ.ಗುರುನಾಥ, ಕಾರ್ಮಿಕ ಮುಖಂಡ ಮಹ್ಮದ್ ಉಬೇದುಲ್ಲಾ ಮಾತನಾಡಿದರು.
ಬಂತೇಜಿ ಕರ್ನಸಂಗಪಾಲ್, ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ. ರಶೀದ್, ಜೆಡಿಎಸ್ ಅಧ್ಯಕ್ಷ ಸೋಮಶೇಖರ ನಂದಿದ್ವಜ, ಉದ್ಯಮಿ ಸಂತೋಷಕುಮಾರ್ ಇಂಗಿನಶೆಟ್ಟಿ, ನಗರ ಸಭೆ ಸದಸ್ಯರಾದ ಡಾ. ಅಹ್ಮದ್ ಪಟೇಲ್, ಸೂರ್ಯಕಾಂತ ಕೋಬಾಳ, ಶ್ಯಾಮ ದಂಡಗುಲಕರ್, ಪತ್ರಕರ್ತರಾದ ಮಲ್ಲಿನಾಥ ಪಾಟೀಲ್, ಸಾಹಿತಿ ಪ್ರಸನ್ನ ಮಂಡಲಗಿರಿ, ಕೆ. ರಮೇಶ ಭಟ್ಟ ಉಪಸ್ಥಿತರಿದ್ದರು.
ಫಾದರ್ ಸೇರಿಲ್ ಲೋಬೋ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಲವದೊರ್ ಫರನಾಂಡಿಸ್, ಅಂತೋನಿ ಫ್ಯಾಟ್ರೀಕ್ ಉಪಸ್ಥಿತರಿದ್ದರು. ಫಾದರ್ ಸಂತೋಷ ದಿಯಾಸ್ ಕಾರ್ಯಕ್ರಮ ನಿರೂಪಿಸಿದರು. ಸೃಜನಾ ವಂದಿಸಿದರು. ತೋಮಾಸ್ ಚರ್ಚ್ನಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement