ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಷ್ಟ್ರಾಭಿಮಾನಸಾರ್ಥಕ ಜೀವನ

Rashmi Kasaragodu
Updated On : 19 Nov 2013, 12:00 pm

ಚಿಂಚೋಳಿ: ಪ್ರತಿಯೊಬ್ಬರಲ್ಲಿ ಧರ್ಮಭಕ್ತಿ, ರಾಷ್ಟ್ರದ ಅಭಿಮಾನವಿದ್ದರೆ ಅವರ ಜೀವನ ಸಾರ್ಥಕವಾಗುತ್ತದೆ ಎಂದು ಚಿಂಚೋಳಿ- ಹಾರಕೂಡ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಶ್ರೀಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಏರ್ಪಡಿಸಿದ್ದ ದೇವಸ್ಥಾನ ಅಡಿಗಲ್ಲು ಸಮಾರಂಭ ನೆರವೇರಿಸಿ ಆಶೀರ್ವಚನ ನೀಡಿದರು. ಮುತ್ತು, ಉಪ್ಪು, ಮತ್ತು ಆಲಿಕಲ್ಲುಗಳು ನೀರಿನಲ್ಲಿಯೇ ಹುಟ್ಟುತ್ತವೆ. ಆದರೆ, ಎಲ್ಲವೂ ಉಪ್ಪು, ಆಲಿಕಲ್ಲು ನೆಲಕ್ಕೆ ಬಿದ್ದಾಗ ಕರಗಿ ಹೋಗುತ್ತವೆ. ಆದರೆ, ಮುತ್ತು ಎಂದಿಗೂ ಕರಗುವುದಿಲ್ಲ. ಅತ್ಯಂತ ಪುರಾತನ ದೇವಾಲಯವನ್ನು ಅದರ ಜೀರ್ಣೋದ್ಧಾರಕ್ಕಾಗಿ ಮಾಡುತ್ತಿರುವುದು ಗಾರಂಪಳ್ಳಿ ಗ್ರಾಮದವರು ಮುತ್ತಿನಂತಹ ಗುಣವೇ ಪ್ರಮುಖವಾಗಿದೆ ಎಂದರು.
ಕಲ್ಯಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸೋಮೇಶ್ವರನಿಗೆ ರುದ್ರಾಭಿಷೇಕ ಬಿಲ್ವಪತ್ರ ಮತ್ತು ಹೂಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಘವಾಂದ ಮಲ್ಲಿಕಾರ್ಜುನ ಸ್ವಾಮೀಜಿ ಕುರುಗೋಡ, ಶಾಮರಾವ ಕೊರವಿ, ಚಂದ್ರಶೇಖರ ಗುತ್ತೇದಾರ, ವೀರಭದ್ರಪ್ಪ ಮಲಕೂಡ, ಬಸವರಾಜ ದೇಶಮುಖ, ದೇಶಮುಖ, ಜಗದೀಶ್ವರಸ್ವಾಮಿ, ಸಂಗನಬಸಯ್ಯ ಸ್ವಾಮಿ, ಲಕ್ಷ್ಮಣ ಒಡೆಯರ್, ಗುರು ಗುತ್ತೇದಾರ, ಮಹಾಂತಪ್ಪ ದೇಶಮುಖ, ಶಿವಕುಮಾರ್, ನಾಗಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement