ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಕಾಯಿತರ ಸುಳಿವು ನೀಡಿದರೆ 1 ಲಕ್ಷ

Mainashree
Updated On : 20 Nov 2013, 10:59 am

ಗುಲ್ಬರ್ಗ: ನಗರದಲ್ಲಿ ಇತ್ತೀಚೆಗೆ ಮುತ್ತೂಟ್ ಫಿನ್ ಕಾರ್ಪ್ ಶಾಖೆಯಲ್ಲಿ 2.12 ಕೋಟಿ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋದ ಡಕಾಯಿತರ ಬಗ್ಗೆ ಸುಳಿವು ನೀಡಿದವರಿಗೆ ಜಿಲ್ಲಾ ಪೊಲೀಸ್ ಇಲಾಖೆಯು 1 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ.
ಕಳೆದ 16ರಂದು ಬೆಳಗ್ಗೆ 8ರ ಸುಮಾರಿಗೆ 6 ಜನ ಡಕಾಯಿತರಲ್ಲಿ ನಾಲ್ವರು ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಗುಲ್ಬರ್ಗ ನಗರದ ಹುಮನಾಬಾದ್ ಬೇಸ್ ಹತ್ತಿರ ಇರುವ ಮೂತ್ತೂಟ್ ಫಿನ್ ಕಾರ್ಪ್ ಶಾಖೆಯಲ್ಲಿ ಪ್ರವೇಶಿಸಿದ್ದರು.
ದರೋಡೆ: ನಂತರ ಮ್ಯಾನೇಜರ್ ಮತ್ತು ಸಿಬ್ಬಂದಿಗೆ ಪಿಸ್ತೂಲ್ ಮತ್ತು ತಲವಾರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿ ಕಂಪ್ಯೂಟರ್, ಸಿಸಿ ಕ್ಯಾಮರಾ ಮತ್ತು ಇತರೆ ಉಪಕರಣಗಳನ್ನು ಒಡೆದು ಹಾಕಿ ಶಾಖೆಯಲ್ಲಿ ಗ್ರಾಹಕರು ಅಡುವಿಟ್ಟ ಒಟ್ಟು 7,030 ಗ್ರಾಂನ ವಿವಿಧ ನಮೂನೆಯ ಬಂಗಾರದ ಆಭರಣಗಳನ್ನು ಮತ್ತು 2 ಲಕ್ಷ ನಗದು ಹೀಗೆ ಒಟ್ಟು 2.12 ಕೋಟಿ ಮೌಲ್ಯದ ಆಭರಣ ಮತ್ತು ನಗದು ಹಣ ದರೋಡೆ ಮಾಡಿದ್ದಾರೆ.
ಬಹುಮಾನ ಘೋಷಣೆ: ಈ ಅಪರಾಧವನ್ನು ಎಸಗಿರುವ ಆರೋಪಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಗೊತ್ತಾದಲ್ಲಿ ಅಥವಾ ಯಾರ ಮೇಲಾದರೂ ಸಂಶಯ ಇದ್ದಲ್ಲಿ ಮತ್ತು ಡಕಾಯಿತರು ಇರುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಖಚಿತವಾದ ಮಾಹಿತಿ ನೀಡಿದರೆ ಪೊಲೀಸ್ ಇಲಾಖೆಯಿಂದ 1 ಲಕ್ಷ ನಗದು ಬಹುಮಾನ ಮತ್ತು ಪ್ರಸಂಶೆ ಪತ್ರ ನೀಡಲಾಗುವುದು.
ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಹಾಗೂ ಬಂಗಾರದ ಆಭರಣಗಳನ್ನು ಮಾರಾಟ ಮಾಡಲು ಮತ್ತು ಕರಗಿಸಿ ಬೇರೆ ಆಭರಣ ಮಾಡಿಸುವವರು ಅಥವಾ ಅಡುವಿಡಲು ಬರುವ ಗ್ರಾಹಕರನ್ನು ವಿಚಾರಿಸಿ ಅನುಮಾನ ಬಂದಲ್ಲಿ ಗುಲ್ಬರ್ಗ ಎಸ್ಪಿ ಮೊ. 9480803500, 9480803501, ಅಪರ ಎಸ್ಪಿ- 9480803502, ಗುಲ್ಬರ್ಗ(ಬಿ) ಉಪ ವಿಭಾಗದ ಡಿಎಸ್ಪಿ- 9480803549, ಪಿಐ ಚೌಕ್ ಪೊಲೀಸ್ ಠಾಣೆ- 9480803549, ಚೌಕ್ ಪೊಲೀಸ್  ಠಾಣೆ-08472- 263622ಗೆ ಕರೆ ಮಾಡಲು ಕೋರಲಾಗಿದೆ. ಡಕಾಯಿತರಲ್ಲಿ ಒಬ್ಬನ ಮುಖಚರ್ಯೆ ರೇಖಾಚಿತ್ರ ಬಿಡುಗಡೆಗೊಳಿಸಲಾಗಿದ್ದು, ಡಕಾಯಿತರ ಪತ್ತೆಗಾಗಿ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement