ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಳೆ ತಾಪಂ ಕಚೇರಿ ಎದುರು ಧರಣಿ

Mainashree
Updated On : 20 Nov 2013, 10:59 am

ಆಳಂದ: ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಗೊಳಪಡುವ ತಾಲೂಕಿನ ಬೆಳಮಗಿ ಗ್ರಾಮ ಪಂಚಾಯತಿಯ ಪುನರ್ ಗ್ರಾಮಸಭೆ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡದೆ ಹೋದಲ್ಲಿ ಆಳಂದ ತಾಪಂ ಕಚೇರಿ ಮುಂದೆ ನ.21ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ ಗಡುವು ನೀಡಿದ್ದಾರೆ.
ಪಂಚಾಯತಿಯ 2013-14ನೇ ಸಾಲಿನ ಗ್ರಾಮಸಭೆ ಶೀಘ್ರವೇ ಕೈಗೊಂಡು ಬಡವರಿಗೆ ನ್ಯಾಯ ಒದಗಿಸಬೇಕು. ಈ ಕುರಿತು ಮೇಲಧಿಕಾರಿ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಜಾಬ್ ಕಾರ್ಡ್ ಒದಗಿಸಬೇಕು. ಸಣ್ಣ ಅತಿ, ಸಣ್ಣ ರೈತರ ಸೌಲಭ್ಯಗಳ ವಿತರಣೆಗೆ ಮೊದಲು ರೂಪಿಸಿದ ಕ್ರಿಯಾಯೋಜನೆ ರದ್ದುಪಡಿಸಿ ಗ್ರಾಮ ಸಭೆಯ ಮೂಲಕ ಕ್ರಿಯಾಯೋಜನೆ ರೂಪಿಸಿ ಅರ್ಹರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ವಸತಿ ಯೋಜನೆಯಡಿ ನಡೆದ ಅವ್ಯವಹಾರ ತನಿಖೆ ಕೈಗೊಂಡು ತಪ್ಪಿರಸ್ಥರ ಮೇಲೆ ಕ್ರಮ ಜರುಗಿಸಿ ಅರ್ಹರಿಗೆ ಮನೆ ಒದಗಿಸಬೇಕು ಎಂಬ ಹಲವು ಬೇಡಿಕೆಗೆ ಈಡೇರಿಸುವಂತೆ ನ.21ರಂದು ತಾಪಂ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಪಂ ಸದಸ್ಯ ರಾಚಣ್ಣ ಸತ್ಯಮನಿ, ಡಿಆರ್‌ಯುಸಿ ಸದಸ್ಯ ಚಂದ್ರಶೆಟ್ಟಿ, ಶಿವಶರಣಪ್ಪ ಮಾಲಿಪಾಟೀಲ್, ಮಲ್ಲಿನಾಥ ಮುರುಡ, ಶಂಕರೆಪ್ಪ , ಹಣಂತರಾವ  ಇತರರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement