ಮನುಷ್ಯನಿಗೆ ಗುರಿ, ಗುರು ಇದ್ದಾಗ ಉನ್ನತಿ
ಕೆಂಭಾವಿ: ಪ್ರತಿ ಮನುಷ್ಯನಿಗೆ ಗುರಿ ಮತ್ತು ಗುರು ಇದ್ದಾಗ ಮಾತ್ರ ಅವನು ಉನ್ನತ ಸ್ಥಾನಕ್ಕೇರಲು ಸಾಧ್ಯ. ಗುರು ಉಪದೇಶ ನಮ್ಮನ್ನು ಸನ್ಮಾರ್ಗದ ಜೊತೆಗೆ ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ರಂಗಗಳಲ್ಲೂ ಕೊಂಡೊಯ್ಯಲು ಸಹಕಾರಿ ಎಂದು ತಾಲೂಕು ಚುಸಾಪ ಅಧ್ಯಕ್ಷ ಶಿವಶರಣಪ್ಪ ಶಿರೂರ ಹೇಳಿದರು. ಸಮೀಪದ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ನಡೆದ 157ನೇ ಶಿವಾನುಭವ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ, ಮನುಷ್ಯನಲ್ಲಿ ಧಾರ್ಮಿಕ ಭಾವನೆ ಬಿತ್ತಿ ಧರ್ಮದಿಂದ ನಡೆಯಲು ಪ್ರೇರೆಪಿಸಲು ಇಂಥಾ ಮಠಗಳು ಸಹಕಾರಿ ಎಂದರು. ಸಾನ್ನಿಧ್ಯ ಮಠದ ಪೀಠಾಧಿಪತಿ ಶಾಂತರುದ್ರಮುನಿ ಶ್ರೀ ವಹಿಸಿದ್ದರು. ಯಂಕಣ್ಣ ಶರಣರು ಉಪನ್ಯಾಸ ನೀಡಿದರು.