ಮಲ್ಲಿಕಾರ್ಜುನ ಶ್ರೀ ಹುಟ್ಟುಹಬ್ಬ ಆಚರಣೆ
ಕೆಂಭಾವಿ: ನಾಲವಾರದ ನಂದಾದೀಪ ಸಿದ್ಧತೋಟೇಂದ್ರ ಶಿವಯೋಗಿ ಕರುಣೆಯ ಕಂದ ಎಂದೇ ಪ್ರಸಿದ್ಧಿ ಪಡೆದ ಸಮೀಪದ ಮುದನೂರಿನ ಕೋರಿಸಿದ್ದೇಶ್ವರ ಪುಣ್ಯಾಶ್ರಮದ ಮಲ್ಲಿಕಾರ್ಜುನ ದೇವರ ಹುಟ್ಟುಹಬ್ಬವನ್ನು ಗೌರಿಹುಣ್ಣಿಮೆಯಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಾಗಣ್ಣ ಸಾಹು ದಂಡಿನ, ಪಿಎಸ್ಐ ಸುನಿಲಕುಮಾರ, ಬಸವರಾಜಪ್ಪಗೌಡ ಶಿವಪುತ್ರಪ್ಪಗೌಡ ಶಿರವಾಳ, ಗಿರೀಶರಡ್ಡಿ ಹೊಟ್ಟಿ, ಯಂಕಾರಡ್ಡಿ, ಹಂಪನಗೌಡ ಸುರಪುರ, ಶಾಂತಪ್ಪ ಬಾರ್ಲೆ ಮಹಾದೇವ ಚಂದಾ, ಬಸವರಾಜ ಸಾಹು ವೈಲಿ ಇದ್ದರು. ಮಲ್ಲಯ್ಯ ಸ್ವಾಮಿ ವಡಿಗೇರಿ ಹಾಗೂ ಸೋಮಶೇಖರ ಪತ್ತಾರ ಇವರು ಸಂಗೀತ ನಡೆಸಿಕೊಟ್ಟರು.