ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಎಸಿಸಿ ಸಿಮೆಂಟ್ ಕಂಪನಿ ಬದ್ಧ
ಗುಲ್ಬರ್ಗ/ಶಹಾಬಾದ್: ಸ್ವಾವಲಂಬಿ ಬದಕು ಸಾಗಿಸುವ ಅಸಹಾಯಕ ಮಹಿಳೆಯರಿಗೆ ಮತ್ತು ಕರಕುಶಲ ಹೊಂದಿರುವ ಬೀದಿ ಕಸಬುದಾರರಿಗೆ ಆರ್ಥಿಕ ನೆರವು ನೀಡಲು ಎಸಿಸಿ ಸಿಮೆಂಟ್ ಕಂಪನಿ ಬದ್ಧ ಎಂದು ಕಂಪನಿ ನಿರ್ದೇಶಕ ಎಸ್.ಬಿ. ಸಿಂಗ್ ಹೇಳಿದರು.
ಪಟ್ಟಣದಲ್ಲಿ ಎಸಿಸಿ ಸಿಮೆಂಟ್ ಕಂಪನಿ ಅಡಿಯಲ್ಲಿರುವ ಸುಸ್ಥಿರ ಅಭಿವೃದ್ಧಿ ವತಿಯಿಂದ ಹಮ್ಮಿಕೊಂಡ ಉಚಿತ ಕರಕುಶಲ ಯಂತ್ರಗಳ ವಿತರಣ ಕಾರ್ಯಕ್ರಮದಲ್ಲಿ ಉಚಿತ ಹೊಲಿಗೆ ಯಂತ್ರ ಸೇರಿದಂತೆ ಇತರ ಕರಕುಶಲ ವಸ್ತಗಳನ್ನು ವಿತರಿಸಿ ಅವರು ಮಾತನಾಡಿದರು.
ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರ್ಥಿಕತೆ ತೊಂದರೆಯಿಂದ ಬಳಲುತ್ತಿರುವ ಮಹಿಳೆಯರನ್ನು ಗುರುತಿಸಿ ಅವರ ಆರ್ಥಿಕ ಸುಧಾರಣೆ ಹಾಗೂ ಸಬಲರಾಗಲು ಅವರಿಗೆ 9000 ಬೆಲೆ ಬಾಳುವ ಹೊಲಿಗೆ ಯಂತ್ರಗಳು ಮತ್ತು ಮೆಣದ ಬತ್ತಿ ತಯಾರಿಸುವ ಯಂತ್ರಗಳು ನೀಡಲಾಗಿದೆ. ಇದರಿಂದ ಮಹಿಳೆಯರು ಯಾರ ಮೇಲೆ ಅವಲಂಬನೆಯಾಗದೇ ಸ್ವಾವಲಂಬಿ ಬದುಕು ಸಾಗಿಸಬೇಕು ಎಂದರು. ಬೀದಿಯಲ್ಲಿ ಕುಳಿತು ಕೆಲಸ ಮಾಡುವ ಬೀದಿ ಕರಕುಶಲ ಕಸಬುದಾರರಿಗೆ ಕೊಡೆ ಸೇರಿದಂತೆ ಕರಕುಶಲ ಕಿಟ್ ವಿತರಿಸಲಾಗಿದೆ. ಇದರಿಂದ ಅವರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎಸಿಸಿ ಸಿಮೆಂಟ್ ಕಂಪನಿ ಎಚ್‌ಆರ್ ವಿಭಾಗದ ಮುಖ್ಯಸ್ಥ ಜೆ.ಜೆ. ಪವಾರ ಮತ್ತು ಕಂಪನಿ ವಿದ್ಯುತ್ ಸರಬರಾಜು ವಿಭಾಗದ ಮುಖ್ಯಸ್ಥ ರಟ್ಟು ಮಾತನಾಡಿದರು.
ಶಾಹನಾಜಬೇಗಂ ಸ್ವಾಗತಿಸಿ, ಜಿಲ್ಲಾ ಆಕೃತಿ ಟ್ರಸ್ಟ್ ಮಂಜುಬಾನು ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಬಳವಡಿಗಿ ವಂದಿಸಿದರು.