ರಾಜ್ಯ ಮಟ್ಟದ ಒಲಂಪಿಯಾಡ್ ಪರೀಕ್ಷೆಗೆ ಆಯ್ಕೆ
ಶಹಾಪುರ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 2013-14ನೇ ಸಾಲಿನ ಒಲಂಪಿಯಾಡ್ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯಿಂದ ಸ.ಹಿ.ಪ್ರಾ. ಶಾಲೆ ಗಂಗನಾಗರ ಹಳಿಸಗರ ಶಹಾಪುರ ಶಾಲೆಯ ವಿದ್ಯಾರ್ಥಿ ರಾಜು ತಂದೆ ಚಂದ್ರಾಮ ಸುರಪುರ 6ನೇ ತರಗತಿ ವಿಜ್ಞಾನ ವಿಷಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ ಎಂದು ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯಗುರುಗಳು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.