ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಿಎಂ ಆಗಮನ; ಬೀಗಿ ಪೊಲೀಸ್ ಬಂದೋಬಸ್ತ್

Mainashree
Updated On : 20 Nov 2013, 10:57 am

ಗುರುಮಠಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ನ.20ರಂದು ಪಟ್ಟಣಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಹಿರಂಗ ಸಭೆಯಲ್ಲಿ ಮಾತನಾಡುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ. ಹೈ-ಕ ಪ್ರದೇಶದ ಕೊಪ್ಪಳ, ಬೀದರ್, ರಾಯಚೂರು, ಗುಲ್ಬರ್ಗ, ಯಾದಗಿರಿ ಜಿಲ್ಲೆಯ ಒಟ್ಟು 6 ಜನ ಡಿವೈಎಸ್ಪಿ, 35 ಜನ ಸರ್ಕಲ್ ಇನ್ಸಪೆಕ್ಟರ್, 35 ಜನ ಪಿಎಸ್‌ಐ, 50 ಜನ ಎಎಸ್‌ಐ, 139 ಎಸ್‌ಐ, 484 ಮಹಿಳಾ ಮತ್ತು ಪುರುಷ ಪೇದೆಗಳನ್ನು ನೇಮಕ ಮಾಡಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಡ್ಡಿಯಾಗದ್ದಂತೆ ಬಿಗಿ ಬಂದೋ ಬಸ್ತ ಕಲ್ಪಿಸಲಾಗಿದೆ.
ಪಾಸ್ ಕಡ್ಡಾಯ: ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಆಫೀಸ್ ಪಾಸ್ ಹೊಂದಿರುವುದು, ಅಗತ್ಯ ಸೇವೆಯ ಸಿಬ್ಬಂದಿ ಸಭಾಂಗಣದಲ್ಲಿ ಕೆಲಸ ಮಾಡುವವರು, ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡುವವರು, ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕೆಲಸ ಮಾಡುವವರು ಹಾಗೂ ಇನ್ನಿತರೇ ಸ್ಥಳಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಹ ಕಡ್ಡಾಯವಾಗಿ ಡ್ಯೂಟಿ ಪಾಸ್ ಹೊಂದಿರುವುದು. ಗಣ್ಯವ್ಯಕ್ತಿಗಳ ಭದ್ರತೆ ದೃಷ್ಟಿಯಿಂದ ಸದರಿಯವರು ಕಡ್ಡಾಯವಾಗಿ ಪಾಸ್ ಪಡೆಯಬೇಕೆಂದು ಎಸ್ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement