ಎಸ್‌ಬಿ ಜ್ಞಾನ ವಿಕಾಸ ಪೀಠದ ಶಿಕ್ಷಣ ಸಂಸ್ಥೆಯಲ್ಲಿ ಕನಕ ಜಯಂತ್ಯುತ್ಸವ
ಶಹಾಬಾದ್: ನಗರಸಭೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಅಧ್ಯಕ್ಷ ಗಿರೀಶ್ ಕಂಬಾನೂರ ಪೂಜೆ ಸಲ್ಲಿಸಿದರು. ಸ್ಥಾಯಿಸಮಿತಿ ಅಧ್ಯಕ್ಷ ಕಾಶಿನಾಥ್ ಜೋಗಿ, ಪೌರಾಯುಕ್ತ ಕೆ. ಗುರುಲಿಂಗಪ್ಪ, ಎಇಇ ಶರಣು ಪೂಜಾರಿ, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.
ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಶಾಲಾ ಕಾಲೇಜುಗಳಲ್ಲಿ ಸಂಸ್ಥೆ ಕಾರ್ಯದರ್ಶಿ ನಿರಂಜ ಗೊಳೇದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಾಚಾರ್ಯ ಚಂದ್ರಶೇಖರ, ಮುಖ್ಯೋಪಾಧ್ಯಾಯರಾದ ಕೆ.ಪಿ. ಸಾಲಿಮಠ, ಶಾರದಾ ಯಾಳವಾರ, ಮಿನಾಕ್ಷಿ ಕೊಲ್ಲೂರ, ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಜಿ.ಜಿ.ವಣಕ್ಯಾಳ ಕನದಾಸರ ಸಾಹಿತ್ಯ ಮತ್ತು ಸಮಾಜಕ್ಕೆ ಅವರು ನೀಡಿದ ಸಂದೇಶ ಕುರಿತು ಮಾತನಾಡಿದರು. ಶಿಕ್ಷಕರು ಮಕ್ಕಳು ಇದ್ದರು.
ಇಂಗಿನಶೆಟ್ಟಿ ಕನ್ನಡ ಶಾಲೆ: ಶ್ರೀಮತಿ ನಾಗಮ್ಮ ಚನ್ನಪ್ಪಾ ಇಂಗಿನಶೆಟ್ಟಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ಮಮತಾ ವಾಲಿ ಭಾವಚಿತ್ರಕ್ಕೆ ಪೂಜೆ ಮೂಲಕ ಗೌರವ ಸಲ್ಲಿಸಿದರು. ಶಿಕ್ಷಕಿ ಸುನಂದಾ, ಶೋಭಾ ಹೆಬ್ಬಾಳ, ಆರತಿ ನಾಲವಾರ, ನಿರ್ಮಲಾ ಮಾತನಾಡಿದರು.
ಹೊನಗುಂಟಿ ಗ್ರಾಮದ ಕನಕದಾಸ ವ್ಥತ್ತದಲ್ಲಿ ನಡೆದ ಸಮಾರಂಭಕ್ಕೆ ಗ್ರಾಪಂ ಸದಸ್ಯೆ ಸಿದ್ದಮ್ಮ ಪ್ರಧಾನಿ ಚಾಲನೆ ನೀಡಿದರು.
ಗಣ್ಯರಾದ ಪೀರಪಾಶಾ, ಭೀಮಾಶಂಕರ ಖೇಣಿ, ದೇವೇಂದ್ರ ಕಾರೋಳ್ಳಿ, ಪೂಜಪ್ಪ ಮೇತ್ರಿ, ಸಾಬಣ್ಣ ಕೊಲ್ಲೂರ, ರಾಯಪ್ಪ ಮಿಣಜಗಿ, ರಾಜು ಆಡಿನ್, ಸಿದ್ದು ವಾರ್ಕರ್, ನಿಂಗಣ್ಣ, ಮಲ್ಲಣ್ಣ ಕೋಲೆ ಪಾಲ್ಗೊಂಡಿದ್ದರು.
ರೇಷ್ಮಿ ಸಂಸ್ಥೆ: ಇಲ್ಲಿನ ಸುಭದ್ರಮ್ಮಾ ರೇಷ್ಮಿ ಸಂಸ್ಥೆಯ ಶಾಲೆ, ಪಪೂ ಹಾಗೂ ಪದವಿ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕನಕದಾಸರ ಬಗ್ಗೆ ಮುಖ್ಯಗುರು ಮಲ್ಲಿಕಾರ್ಜುನ ಸಲಗರ್ ಮಾತನಾಡಿದರು. ಆಡಳಿತ ಮಂಡಳಿಯ ಗುರುಶರಣ ಪಾಟೀಲ, ನಾಗೇಶ ಜಾಲಹಳ್ಳಿ, ಶಿಕ್ಷಕಿ ಅಶ್ವಿನಿ, ಸರಿತಾ, ಸವಿತಾ, ದಾನಮ್ಮ ಹಿರೇಮಠ ಇದ್ದರು.
ಬಿಜೆಪಿ ಕಾರ್ಯಾಲಯ: ನಗರ ಘಟಕದ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಹಿರಿಯ ಮುಖಂಡ ಅರುಣ ಪಟ್ಟಣಕರ್ ಮಾತನಾಡಿದರು. ಚಂದ್ರಕಾಂತ ಗಬ್ಬೂರ, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ನಾಗಣ್ಣಾ ರಾಂಪೂರೆ, ಶರಣು ವಸ್ತ್ರದ್, ಸುಭಾಷ ಜಾಪೂರ, ತಿಮ್ಮಣ್ಣ, ನಗರಸಭೆ ಸದಸ್ಯರಾದ ಸಾಬಣ್ಣ ಬೆಳಗುಂಪಿ, ಡಾ. ಅಶೋಕ ಜಿಂಗಾಡೆ, ಪಕ್ಷದ ಇತರೆ ಗಣ್ಯರು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.