ಕನಕದಾಸರ ಬದುಕು-ಬರೆಹ ಸರ್ವ ಕಾಲಕ್ಕೂ ಪ್ರಸ್ತುತ
ಸುರಪುರ: ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಿತ ವರ್ಗಗಳಿಗೆ ಸಾಮಾಜಿಕ ಸಮಾನತೆ ನೀಡಲು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದವರಲ್ಲಿ ಕನಕದಾಸರೂ ಒಬ್ಬರಾಗಿದ್ದಾರೆ. ಅವರ ಬದುಕು-ಬರಹ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅಭಿಪ್ರಾಯಪಟ್ಟರು.
ಇಲ್ಲಿಯ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಏರ್ಪಡಿಸಲಾಗಿದ್ದ, ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕನಕದಾಸರು ತುಳಿತಕ್ಕೊಳಗಾದ ವರ್ಗದವರ ಬಗ್ಗೆ ಕಾಳಜಿ ಹೊಂದಿದ್ದರು. ಇದನ್ನು ಕನಕದಾಸರ ಕವಿತೆಯಲ್ಲಿ ನಾವು ಕಾಣುತ್ತೇವೆ ಎಂದರು.
ತಾಪಂ ಅಧ್ಯಕ್ಷ ಶ್ರೀನಿವಾಸಗೌಡ ಪಾಟೀಲ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಎಪಿಎಂಸಿ ಅಧ್ಯಕ್ಷ ಬಸಣ್ಣ ಬಾಳಪ್ಪ ಭಂಗಿ ವೇದಿಕೆಯಲ್ಲಿದ್ದರು. ವೆಂಕಾರೆಡ್ಡಿ ಬೋನ್ಹಾಳ, ಬಸವರಾಜ ಕೊಡೇಕಲ್ ಉಪನ್ಯಾಸ ನೀಡಿದರು. ನಿಂಗಣ್ಣ ಚಿಂಚೋಡಿ ಮಾತನಾಡಿದರು.
ಪ್ರಮುಖರಾದ ನಿಂಗಣ್ಣ ಬಾದ್ಯಾಪುರ, ರಂಗನಗೌಡ ದೇವಿಕೇರಿ, ನಿಂಗರಾಜ ಬಾಚಿಮಟ್ಟಿ, ಮಲ್ಲು ದಂಡಿನ್, ಭೀಮಣ್ಣಗೌಡ ಮಾಲಿ ಪಾಟೀಲ್, ಬಲಭೀಮ ಮಲ್ಕಾಪುರ, ಮಲ್ಲೇಶಿ ಪಾಟೀಲ್, ವೆಂಕಟೇಶ ಹೊಸ್ಮನಿ, ಮನೋಹರ ಕುಂಟೋಜಿ, ಶಿವುಕುಮಾರ ಎಲಿಗಾರ್,ಆದಪ್ಪ ಹೊಸ್ಮನಿ, ರಮೇಶ ಅರಕೇರಿ, ಮಾಳಪ್ಪ ಕಿರದಳ್ಳಿ, ಧರ್ಮರಾಜ ಬಡಿಗೇರ್, ಉಸ್ತಾದ ವಜಾಹತ್ ಹುಸೇನ್, ಹೊನಕೇರಪ್ಪ ಹಾದಿಮನಿ, ವೆಂಕಟೇಶ ಭಕ್ತಿ ಹಲವರಿದ್ದರು. ಸಿದ್ಧಯ್ಯ ಸ್ವಾಮಿ ಸ್ವಾಗತಿಸಿ ನಿರೂಪಿಸಿದರು. ಕಂದಾಯ ನಿರೀಕ್ಷಕ ಅಣವೀರಪ್ಪ ವಂದಿಸಿದರು.
ಆರ್ವಿಎನ್ ಚಾಲನೆ: ಶಾಸಕ ರಾಜಾ ವೆಂಕಟಪ್ಪನಾಯಕ ಅಂಬೇಡ್ಕರ್ ವೃತ್ತದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಮುಖಂಡರಾದ ಶಿವಣ್ಣ ಮಂಗೀಹಾಳ, ಸೂಲಪ್ಪ ಕಮತಗಿ, ಬಸನಗೌಡ ಯಡಿಯಾಪುರ, ಪ್ರಭುಗೌಡ ಪಾಟೀಳ್, ಮಲ್ಲಪ್ಪ ಐಕೂರು, ಶಿವು ಎಲಿಗಾರ, ಪುರಸಭೆ ಮುಖ್ಯಾಧಿಕಾರಿ ಏಜಾಜ್, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣೀಗೇರೆ ಹಲವರಿದ್ದರು.
ಬಿಜೆಪಿ ಕಚೇರಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ತಾಲೂಕು ಅಧ್ಯಕ್ಷ ಮಲ್ಲೇಶಿ ನಾಗರಾಳ, ಮುಖಂಡರಾದ ಬಸವರಾಜ ಜಡಿಮರಳ್, ಅನೀಲ ಗುತ್ತೇದಾರ, ತಿಪ್ಪಣ್ಣ ಮ್ಯಾಕಲ್, ನಾರಾಯಣರಾವ ಬಳಗನೂರು, ಮಾಳಪ್ಪ ಕುರಬರ ಗಲ್ಲಿ, ಗೋಪಾಲ ನಾಯಕ, ಶಿವಲಿಂಗಪ್ಪ ಎಮ್ಮೇರ, ಮಲ್ಲು ಹೂಗಾರ ಹಲವರಿದ್ದರು. ಕನ್ನಡ ಸೇನೆ ಕಚೇರಿಯಲ್ಲಿ ಆಚರಿಸಲಾಯಿತು. ರಾಜೂ ಕುಂಬಾರ್, ಮರೆಪ್ಪ ಹವಲ್ದಾರ್ ಅನೇಕರಿದ್ದರು.