ಕುಲ ನೆಲೆ ಬುನಾದಿ ಅಲುಗಾಡಿಸಿದರು
ಗುಲ್ಬರ್ಗ: ಕುಲ ಕುಲವೆಂದು ಏಕೆ ಬಡಿದಾಡುತ್ತೀರಾ ಎಂಬ ಪ್ರಶ್ನೆಯ ಮೂಲಕ ಕುಲದ ನೆಲೆಯ ಬುನಾದಿಯನ್ನು ಅಲುಗಾಡಿಸಿದವರು ಕನಕದಾಸರು ಎಂದು ಎನ್.ವಿ. ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಪ್ರೊ. ರವೀಂದ್ರ ಕರ್ಜಗಿ ಹೇಳಿದರು.
ಹೊರವಲಯದ ಮಹಾದೇವಿತಾಯಿ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಪುರುಷ ವೃದ್ಧಾಶ್ರಮದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಪಂ ಸದಸ್ಯ ಸಿದ್ಧಾರ್ಥ ಬಸರಿಗಿಡ, ಜಾತಿಯತೆಯಂತಹ ಮಹಾಪಿಡುಗಿನಿಂದ ಕಷ್ಟ ಅನುಭವಿಸಿ ಆ ಬಗ್ಗೆ ಸಾಹಿತಿಕವಾಗಿ ಹೋರಾಟ ಮಾಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.
--
ಪ್ರ.ದ.ಸ ಮುಂಬಡ್ತಿ ಪಟ್ಟಿ ಪ್ರಕಟ: ವೀಕ್ಷಿಸಲು ಸೂಚನೆ
ಗುಲ್ಬರ್ಗ: ಪೊಲೀಸ್ ಇಲಾಖೆಯ ವಿವಿಧ ಘಟಕಗಳಿಗೆ ಸಂಬಂಧಪಟ್ಟಂತೆ 1.11.1956 ರಿಂದ 25.7.2001ರ ವರೆಗಿನ ದ್ವಿ.ದ.ಸ. ಹುದ್ದೆಯಿಂದ ವಲಯವಾರು ವೃಂದದಲ್ಲಿ ಪ್ರ.ದ.ಸ. ಹುದ್ದೆಗೆ ಮುಂಬಡ್ತಿ ಹೊಂದಿ ಪ್ರಕಟಿಸಿದ ಜೇಷ್ಠತಾ ಪಟ್ಟಿಗನುಗುಣವಾಗಿ ರಾಜ್ಯವಾರು ಪ್ರ.ದ.ಸ. ಹುದ್ದೆಯ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅ.21ರಂದು ಪೊಲೀಸ್ ಇಲಾಖೆಯ ವೆಬ್ಸೈಟ್ ಢಿಢಿಢಿ.್ಞಡಠ.್ಜ್ಟಢ.್ಝಟಿ ರಲ್ಲಿ ಪ್ರಕಟಿಸಲಾಗಿದೆ. ಆಸಕ್ತ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ನಿವೃತ್ತ ಪ್ರ.ದ.ಸ. ರವರು ತಮ್ಮ ಜೇಷ್ಠತೆಯ ಬಗ್ಗೆ ಪರಿಶೀಲನೆ ಮಾಡಿ, ಆಕ್ಷೇಪಣೆ ಅಥವಾ ಸಲಹೆ ಏನಾದರೂ ಇದ್ದರೆ ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗೆ ನೇರವಾಗಿ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು ಅವರಿಗೆ ಸಲ್ಲಿಸಿ, ಸಂಬಂಧಪಟ್ಟ ವಲಯ ಕಚೇರಿಗೆ ಮಾಹಿತಿ ಸಲ್ಲಿಸಲು ಈಶಾನ್ಯ ವಲಯ ಪೊಲೀಸ್ ಮಹಾ ನಿರೀಕ್ಷಕರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ 17,743 ದಂಡ
ಗುಲ್ಬರ್ಗ: ಈಶಾನ್ಯ ರಸ್ತೆ ಸಾರಿಗೆ ಸಂಸ್ತೆಯ ಗುಲ್ಬರ್ಗ ವಿಭಾಗ-2 ರಿಂದ ಅಕ್ಟೋಬರ್ 2013 ಮಾಹೆಯಲ್ಲಿ ಒಟ್ಟು 1594 ವಾಹನಗಳನ್ನು ತಪಾಸಣೆ ಮಾಡಿ, ಟಿಕೆಟ್ ರಹಿತ ಪ್ರಯಾಣಿಸುತ್ತಿರುವ 145 ಪ್ರಯಾಣಿಕರಿಂದ ಟಿಕೆಟ್ ದರಕ್ಕಿಂತ 10 ಪಟ್ಟು ಹೆಚ್ಚಿಗೆ ದಂಡದ ಹಣವನ್ನಾಗಿ 17743 ವಸೂಲಿ ಮಾಡಲಾಗಿದೆ. ಆದಕಾರಣ ಎಲ್ಲ ಪ್ರಯಾಣಿಕರು ನಿರ್ವಾಹಕರಿಂದ ಟಿಕೆಟ್ ಕೇಳಿ ಪಡೆದು ಪ್ರಯಾಣಿಸಲು ಸಾರ್ವಜನಿಕರಲ್ಲಿ ವಿಭಾಗೀಯ ನಿಯಂತ್ರಣಧಿಕಾರಿ ಇನಾಯತ್ ಬಾಗವಾನ್ ಕೋರಿದ್ದಾರೆ.