ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿತ್ತಾಪುರ: ವಿವಿಧೆಡೆ ಕನಕಜಯಂತಿ

Lingaraj Badiger
Updated On : 21 Nov 2013, 11:09 am

ಚಿತ್ತಾಪುರ: ತಾಲೂಕು ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಸುರೇಶ ಬೆನಕನಹಳ್ಳಿ, ದಶರಥ ದೊಡ್ಮನಿ, ರಾಮದಾಸ ಚವ್ವಾಣ, ಮುಖಂಡರಾದ ನಾಗರಾಜ ಹೂಗಾರ, ಯುವ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ಬಾಲಾಜಿ ಬುರಬುರೆ, ಪ್ರಲ್ಹಾದ ವಿಶ್ವಕರ್ಮ ಇದ್ದರು.
ಎಪಿಎಂಪಿ ಕಚೇರಿ: ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಕಾರ್ಯದರ್ಶಿ ಶಿವಶಂಕರ ನನ್ನಾ, ಶರಣು ಪಾಟೀಲ್ ಇದ್ದರು.
ಸರ್ಕಾರಿ ಪ್ರೌಢಶಾಲೆ ಸಾತನೂರು ಮುಖ್ಯಗುರು ಶಿವಮ್ಮ ದೊಡ್ಮನಿ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕರಾದ ಸುನಂದಾ ಬಾರಡ, ವಿಜಯಕುಮಾರ, ಗೀತಾ ಹಿಪ್ಪರಗಿ, ಶಂಕರಮ್ಮ ದೈ.ಶಿ. ದೇವಿಂದ್ರ ರೆಡ್ಡಿ ದುಗನೂರ ಇದ್ದರು. ಸಂತೋಷಕುಮಾರ ಶಿರನಾಳ ನಿರೂಪಿಸಿದರು. ಸಿದ್ದಮ್ಮ ವಂದಿಸಿದರು.
ಗ್ರಾಪಂ ಟೆಂಗಳಿ: ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಿಡಿಒ ಕಾವೇರಿ ರಾಠೋಡ, ಬಸವರಾಜ ತುಪ್ಪದ, ಭೀಮಾಶಂಕರ ತೊನಸನಹಳ್ಳಿ, ಗುಂಡಪ್ಪ ದಿಗ್ಗಾಂವ, ಮಲ್ಲಿಕಾರ್ಜುನ ನಂದೂರ, ಖಲೀಲಮಿಯ್ಯ, ಸಿದ್ದಮ್ಮ ಬುಳ್ಳಾ, ಗಿರಿಮಲ್ಲಪ್ಪ ಬೂಸನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement