ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಾತಿರಹಿತ ತತ್ವಗಳು ಇಂದಿಗೂ ಪ್ರಸ್ತುತ

Lingaraj Badiger
Updated On : 21 Nov 2013, 11:09 am

ಶಹಾಬಾದ್: ಕನಕದಾಸರು ತಮ್ಮ ಹಾಡುಗಳಿಂದ ಜಾತಿಯನ್ನು ಮೀರಿದ ಮಹತ್ವರಾಗಿದ್ದು, ಅವರು ಪ್ರಸ್ತುತ ಪಡಿಸಿದ ಜಾತಿ ರಹಿತ ಸಮಾಜದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕಸಾಪ ವಲಯ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ ಹೇಳಿದರು.
ನಗರದ ಹೊರವಲಯದ ಕನಕದಾಸ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕನದದಾಸರ 526ನೇ ಜಯಂತಿಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ಅಧ್ಯಕ್ಷ ಬಸವರಾಜ ಮದ್ರಕಿ ಕನದ ದಾಸರ ಬದುಕು, ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು.
ಅಖಿಲ ಕರ್ನಾಟಕ ಕುರುಬ ಸಂಘದ ಶಹಾಬಾದ್ ಘಟಕದ ಅಧ್ಯಕ್ಷ ಮರಲಿಂಗ ಕಮರಡಗಿ, ಜೆಡಿಎಸ್ ಮುಖಂಡ ಲೋಹಿತ್ ಕಟ್ಟಿ, ಬಿಜೆಪಿ ಮುಖಂಡ ನಾಗಣ್ಣಾ ರಾಂಪೂರೆ, ದಸಂಸ ತಾಲೂಕ ಅಧ್ಯಕ್ಷ ಕೃಷ್ಣಪ್ಪ ಕರಣಿಕ ಮಾತನಾಡಿದರು. ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್, ಬಿಜೆಪಿ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಸಮಜದ ಮುಖಂಡರಾದ ಶಿವಯೋಗಿ ಕುಂಟೇನ್, ಮಲ್ಲಿಕಾರ್ಜುನ ಪಟ್ಟಣಕರ್, ಶಿವಾನಂದ ಪಟ್ಟಣ, ದೊಡ್ಡಪ್ಪ ಪೂಜಾರಿ, ನಗರಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement