ರಸ್ತೆ ಅಪಘಾತ: ಪರಿಹಾರ ವಿತರಣೆ
ಹುಣಸಗಿ: ಕಳೆದ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುರಪುರ ತಾಲೂಕಿನ 22 ಜನ ಮೃತ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಒಂದು ಲಕ್ಷ ಮೊತ್ತದ ಪರಿಹಾರ ಚಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಮಂಗಳವಾರದಂದು ವಿತರಿಸಿದರು.
ಸಮೀಪದ ಉಪ್ಪಲದಿನ್ನಿ ತಾಂಡಾಕ್ಕೆ ತೆರಳಿದ ಉಸ್ತುವಾರಿ ಸಚಿವರು ಮತ್ತು ಶಾಸಕರೊನ್ನಳಗೊಂಡ ತಂಡ ತಾಂಡಾದ ಜನರಿಗೆ ಸಾಂತ್ವಾನ ಹೇಳಿ ಸರ್ಕಾರ ನೀಡಿರುವ ಚಕ್‌ನ್ನು ಮೃತರ ಕುಟುಂಬದ ಸದಸ್ಯರಿಗೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುರಾವ ಚಿಂಚನಸೂರ, ಇದು ನಮ್ಮ ಸರ್ಕಾರವು ಕೇವಲ ಎರಡೇ ದಿನಗಳಲ್ಲಿ ಪರಿಹಾರದ ಚಕ್ ವಿತರಿಸುತ್ತಿದ್ದು, ನಾವು ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇವೆ. ಈ ಒಂದು ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚಿಸಿ ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದ ಶಾಸಕರು ಮಹತ್ವದ ಪಾತ್ರವಹಿಸಿದ್ದಾರೆಂದರು.
ಸುರಪುರದ ಶಾಸಕರ ರಾಜಾ ವೆಂಕಟಪ್ಪನಾಯಕ, ಅಲ್ಲಮಪ್ರಭು ಪಾಟೀಲ, ರಾಜಶೇಖರಗೌಡ ವಜ್ಜಲ್, ಪ್ರಭುಗೌಡ ಪಾಟೀಲ ರಾಜನಕೊಳೂರ, ನಿಂಗಣ್ಣ ಸಾಹು ಬಳಿ, ಸೂಲಪ್ಪ ಕಮತಗಿ, ವೆಂಕೊಬ ಯಾದವ್, ಚಂದ್ರಶೇಖರಗೌಡ, ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಪಡಸಲಗಿ, ರಾಮುನಾಯಕ, ಯಲ್ಲಪ್ಪಗೌಡ, ಎ.ಜಿ. ಕುಂಬಾರ, ಬಸವರಾಜ ಹುಡೇದ, ಶಾಂತಗೌಡ, ಅಲ್ಲಭಕ್ಷ ಹಣಗಿ, ತಾರಾಸಿಂಗ್, ಹಣಮಂತ್ರಾಯ, ಸಂಗಪ್ಪ ಗಡ್ಡಿ, ಅಂಬ್ರೇಶ, ವಿಜಯಕುಮಾರ, ಶೈಲಜಾ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಇನ್ನೂಳಿದ ಎಲ್ಲಾ ಮೃತ ಕುಟುಂಬಗಳ ಗ್ರಾಮಗಳಿಗೆ ತೆರಳಿದ ಶಾಸಕ ವೆಂಕಟಪ್ಪನಾಯಕ ಚಕ್‌ವಿತರಿಸಿದರು.