ಸೇವೆಯಿಂದ ವಿಮೋಚನೆ
ಗುಲ್ಬರ್ಗ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ನೇತ್ರ ಸಹಾಯಕ ಮಹಮ್ಮದ್ ಜಹೀರೊದ್ದೀನ್ ಖಾನ್ ಖಾಯಂ ಪೂರ್ವ ಸೇವಾವಧಿಯಲ್ಲಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವುದರಿಂದ ಅವರ ಸೇವೆಯಿಂದ ವಿಮೋಚನೆಗೊಳಿಸಲಾಗಿದೆ. 6.7.2005 ರಿಂದ 7.1.2013ರವರೆಗೆ ಕೈಯಂ ಪೂರ್ವ ಸೇವಾವಧಿಯಲ್ಲಿಯ ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಪಾಟೀಲ್ ಆದೇಶಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ನಗರದಲ್ಲಿ 11ಕೆ.ವಿ ಮಾರ್ಗ ವಿಸ್ತರಣೆ, ಹೆಚ್ಚುವರಿ ಪರಿವರ್ತಕ ಅಳವಡಿಸುವುದು ಹಾಗೂ ಎಲ್.ಟಿ. ಎಬಿ ಕೇಬಲ್ ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, 11 ಕೆವಿ ಐ- ವಾನ್ ಶಾಹಿ ಹಾಗೂ ರಾಘವೇಂದ್ರ ಕಾಲೋನಿ ಫೀಡರ ಮೇಲೆ ನ.21 (ಗುರುವಾರ) ಬೆ.10 ರಿಂದ ಸಂಜೆ 5 ಗಂಟೆವರೆಗೆ ನಗರದ ವಾಣಿಜ್ಯ ಬಡಾವಣೆ ಪ್ರದೇಶದಲ್ಲಿ ಕೆಲಸ ಕೈಗೊಳ್ಳಲಾಗುತ್ತಿದೆ. ಅಂದು ಹಳೆಯ ಗೇಸ್ಟ್ಹೌಸ್, ನೀಚೆಗಲ್ಲಿ, ಕಮರ್ ಸಯಲ್ ಟ್ಯಾಕ್ಸ್ ಕಚೇರಿ, ವಿಜಯ ವಿದ್ಯಾಲಯ, ಲಾಹೋಟಿ ಪೆಟ್ರೋಲ್ ಪಂಪ್, ಹೆಚ್.ಕೆ.ಇ. ಕಚೇರಿ, ಎಸಿಯನ್ ಪ್ಲಾಜಾ, ಪರಿವಾರ ಹೋಟೆಲ್, ತಿಮ್ಮಾಪುರಿ ಚೌಕ್, ವಿ.ಜಿ ಉಮನ್ಸ್ ಕಾಲೇಜ್, ಎನ್.ವಿ. ಶಾಲೆ, ಶರಣನಗರ ಗೋವಾ ಹೋಟೆಲ್, ಬ್ರಹ್ಮಪೂರ್, ಎಸ್.ಬಿ. ಟೆಂಪಲ್ ಏರಿಯಾ, ಕುಂಬಾರಗಲ್ಲಿ, ಮಾಹಾನಗರ ಪಾಲಿಕೆ ಕಚೇರಿ, ಸಂಗಮೇಶ್ವರ ಕಾಲೋನಿ, ಸುಭಾಶ ಚೌಕ್ ಮತ್ತು ಸೈನ್ಸ್ ಸೆಂಟರ್ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಕೋರಿದೆ.
--
ಕನ್ನಡಿಗರಿಗೆ ಅನ್ಯಾಯ; ಆಕ್ರೋಶ
ಕ.ಪ್ರ. ವಾರ್ತೆ, ಚಿತ್ತಾಪುರ, ನ.20
ತಾಲೂಕಿನ ಇಟಗಾ ಬಳಿ ನಿರ್ಮಾಣಗೊಳ್ಳುತ್ತಿರುವ ಒರಿಯಂಟಲ್ ಕಂಪನಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಇಲ್ಲಿಯ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ನರಹರಿ ಕುಲಕರ್ಣಿ ಅವರ ನೇತೃತ್ವದಲ್ಲಿ ಚಿತವಲಿ ಚೌಕನಿಂದ ಪ್ರತಿಭಟನೆ ನಡೆಸಿ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿ ತೆರಳಿ ಉಪ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇಲ್ಲಿಯ ಸ್ಥಳೀಯರಿಗೆ ನಿರ್ಲಕ್ಷ್ಯ ವಹಿಸಿ ದೂರದ ಬಿಹಾರ, ಮಧ್ಯಪ್ರದೇಶ ಸೇರಿದಂತೆ ವಿವಿಧ ಕಡೆ ಕಾರ್ಮಿಕರನ್ನು ಕೆಲಸಕ್ಕೆ ಬಂದಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ ಹಾಗೂ 371 ಕಲಂ ತಿದ್ದುಪಡಿ ಜಾರಿಯಾದರೂ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ ಎಂದು ಕರವೇ ಮುಖಂಡರು ಆರೋಪಿಸಿ ಕಾರ್ಮಿಕ ಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ಗೆ ಸಲ್ಲಿಸಿದರು.
ಕನ್ನಡದಲ್ಲಿ ನಾಮಫಲಕ ಹಾಕಬೇಕು. ಕನ್ನಡಿಗರಿಗೆ ಆದ್ಯತೆ ಕೋಡಬೇಕು. ಪರಿಸರ ಮಾಲಿನ್ಯ ಕಾಪಾಡಿಕೊಂಡು ಹೋಗಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು. 15 ದಿನಗಳ ಒಳಗಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಚಿತ್ತಾಪುರ ಬಂದ್ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಬಸವರಾಜ ಮಡಿವಾಳ, ಶ್ರೀನಿವಾಸ ವಗ್ಗರ್, ರಮೇಶ ಪಾಟೀಲ್, ಮಂಜುನಾಥ ಸ್ವಾಮಿ, ರಾಮು, ತಿಮ್ಮಯ, ಸುಧಾಕರ್ ಕರ್, ಕುಪೇಂದ್ರ ಇತರರು ಇದ್ದರು.