'ಆಶ್ರಯ' ಮನೆ ಹಂಚಿಕೆ ವಿಳಂಬ: ಶಾಸಕ ಬಿಆರ್ ತರಾಟೆ
ಆಳಂದ: ಸಭೆಯ ನಡಾವಳಿ ಬರೆಯಲು ಕೂಡ ಸಿಬ್ಬಂದಿಯಿಲ್ಲದೆ, ಸ್ವತಹ ಮುಖ್ಯಾಧಿಕಾರಿ ನಡಾವಳಿ ಬರೆಯಲು ಕುಳಿತ್ತಿದ್ದು ಕಂಡು ಶಾಸಕರೇ ಆಶ್ಚರ್ಯಪಟ್ಟರು. ಆದರೆ, ಸಭೆಗೆ ಅಗತ್ಯವಾದ ಪ್ರತಿ, ದಾಖಲೆ ನೀಡಲಿಲ್ಲ. ಹಿಂದಿನ ನಡಾವಳಿ ಪ್ರತಿಯೂ ಸಮಿತಿ ಸದಸ್ಯರಿಗೆ ಕೊಟ್ಟಿಲ್ಲ. ಆಶ್ರಯ ಯೋಜನೆ ಸರ್ಕಾರದ ಪತ್ರಗಳು ಕೂಡ ಬಂದಿಲ್ಲ ಎನ್ನುವುದು ಎಲ್ಲವನ್ನು ಆಶ್ರಯ ಸಮಿತಿ ಸಭೆಯಲ್ಲಿ ಮುಖ್ಯಾಧಿಕಾರಿ ಬಗ್ಗೆ ಶಂಕೆ ವ್ಯಕ್ತಪಡಿಸುವಂತೆ ಮಾಡಿತ್ತು.
ನಮ್ಮ ಜಾಗ ನಮ್ಮ ಮನೆ, ವಾಜಪೇಯಿ ಆಶ್ರಯ, ರಾಜೀವಗಾಂಧಿ ವಸತಿ ಹೀಗೆ ನನೆಗುದ್ದಿಗೆ ಬಿದ್ದುಕೊಂಡಿವೆ. ಅಧಿಕಾರಿಗಳು ಮಾಹಿತಿಯೇ ಇಲ್ಲವಾಗಿರುವುದು ದುರಂತವಾಗಿದೆ.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ್ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ ಒದಗಿಸಬೇಕಾಗಿದ್ದ ಎಲ್ಲ ದಾಖಲೆಗಳು ಇಲ್ಲವಾಗಿವೆ ಎಂದು ಸ್ವತಹ ಮುಖ್ಯಾಧಿಕಾರಿ ಖೈಸರ್ ಹುಸೇನಿ ಅಸಹಾಯಕತೆ ತೋಡಿಕೊಂಡ ಘಟನೆ ನಡೆಯಿತು.
ಏಳೆಂಟು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಸ್ಥಳೀಯ ಪುರಸಭೆ ವ್ಯಾಪ್ತಿಯ ರಾಜೀವಗಾಂಧಿ ಆಶ್ರಯ ಮನೆ ಸೇರಿ ಇನ್ನಿತರ ಆಶ್ರಯ ಯೋಜನೆಯ ಫಲಾನುಭವಿ ಆಯ್ಕೆ ಪಟ್ಟಿ, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಾಪತ್ತೆಯಾದ ಅಶ್ಚರ್ಯಕರ ಪ್ರಕರಣ ಎದುರಾಗಿದೆ. ತಮ್ಮ ಬಳಿ ಯಾವುದೇ ದಾಖಲೆಗಳು ಲಭ್ಯವಿಲ್ಲ, ವರ್ಗಾವಣೆ ಆಗಿ ಹೋದ ಸಿಬ್ಬಂದಿ ಹಸ್ತಾಂತರಿಸಿಲ್ಲ. ಅವರಿಟ್ಟಿದ್ದ ಅಲಮಾರಿನಲ್ಲೂ ದಾಖಲೆಗಳಿಲ್ಲ ಎಂದಾಗ ಶಾಸಕರ ಸಿಟ್ಟು ನೆತ್ತಿಗೇರಿತ್ತು. ಆದರೂ, ಮುಖ್ಯಾಧಿಕಾರಿ ನಯವಾಗಿಯೇ ಮಾಹಿತಿ ಆಲಿಸಿದ ಪ್ರಸಂಗ ನಡೆಯಿತು.
ಯಾವುದೇ ಮಾಹಿತಿ ಇಲ್ಲ: “@ÆÃ, ಹಿಂದಿನ ಸಭೆಯಲ್ಲೂ ನೀವು ಇದ್ದವರು ಈಗ ಯಾವುದೇ ಮಾಹಿತಿ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿರುವುದು ÑÚ¾ÚßÄÇ...’ ಎಂದ ಶಾಸಕರೂ ಹಣೆಗೆ ಕೈಯೂರಿ ಕುಳಿತರು. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಬೆಂಗಳೂರಿನ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಮೊಬೈಲ್ನಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಬಡವರಿಗೆ ಮನೆ ವಿತರಿಸಬೇಕಾಗಿದೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಅವ್ಯವಸ್ಥೆಗೆ ಸಿಡಿಮಿಡಿಗೊಂಡ ಶಾಸಕರು ಆಶ್ರಯ ಸಮಿತಿಗೆ ಅವಮಾನಿಸಲಾಗಿದೆ. ಬಡವರಿಗಾಗಿ ಬಂದ ಸರ್ಕಾರದ ಸೌಲಭ್ಯಗಳು ಜನರಿಗೆ ಮುಟ್ಟಿಸಬೇಕು ಎಂದರೆ, ಅಧಿಕಾರಿಗಳ ಈ ವರ್ತನೆ, ತಪ್ಪಿನಿಂದಾಗಿ ಬಡವರಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಹಿಂದೆ ಶಾಸಕರಾಗಿದ್ದಾಗ ಡಾ.ಜವಳಿ ಅವರಿಗೆ ಸೇರಿದ 15 ಎಕರೆ ಜಮೀನು ಖರೀದಿಸಿ ಆಶ್ರಯ ಕಲ್ಪಿಸುವ ಉದ್ದೇಶವನ್ನು ಇಷ್ಟು ವರ್ಷಗಳಾದರೂ ಬಾಕಿ ಉಳಿಸಲಾಗಿದೆ ಏಕೆ ಎಂದು ಬಿ.ಆರ್. ಪ್ರಶ್ನಿಸಿದರು.
ಆಶ್ರಯ ಸಮಿತಿ ಸಭೆ ಕರೆದು ಸಂಬಂಧಿತ ಒಂದು ಪ್ರತಿಯೂ ಸಭೆ ಎದುರಿಗೆ ತರದೇ ಇರುವುದು ಏನಿದರ ಮರ್ಮ? ಮತ್ತೊಮ್ಮೆ ತುರ್ತು ಸಭೆಯಲ್ಲಿ ದಾಖಲೆಗಳು ಹಾಜರುಪಡಿಸಿ ಬಡವರಿಗೆ ಮನೆ ಒದಗಿಸುವಂತಾಗಬೇಕು ಎಂದು ಮೇಲಾಧಿಕಾರಿಗೆ ಮೊಬೈಲ್ ಮೂಲಕ ತಾಕೀತು ಮಾಡಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಎಸ್.ಹತ್ತಿ, ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ, ತಾಲೂಕು ಪಂಚಾಯತಿ ಇಒ ಲಕ್ಷ್ಮಣ ಶೃಂಗೇರಿ, ಯೋಜನಾಧಿಕಾರಿ ಗುರುನಾಥ ಗೌಡಪ್ಪ, ಪುರಸಭೆ ಸಿಬ್ಬಂದಿ ಶಿವರಾಯ ಹತ್ತರಕಿ, ರೋತೆ ಹಾಜರಿದ್ದರು.
--