ರಾಜ್ಯಮಟ್ಟಕ್ಕೆ ಜಾಕನಪಲ್ಲಿ ಮಕ್ಕಳು
ಸೇಡಂ: ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಅವರ ಆದೇಶದ ಮೇರೆಗೆ ಗುಲ್ಬರ್ಗದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತಾಲೂಕಿನ ಜಾಕನಪಲ್ಲಿ ಸರ್ಕಾರಿ ಪ್ರೌಢಶಾಲೆಯ 'ನಾನು-ನಮ್ಮೂರು' ವೇದಿಕೆ ಮಕ್ಕಳು ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿದ್ದಾರೆ.
ನ.27ರಂದು ನಡೆಯುವ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗೆ 9ನೇ ತರಗತಿಯ ಭವಾನಿ, ಭೀಮವ್ವ, ಲಕ್ಷ್ಮಣ, ಕೇಶವರೆಡ್ಡಿ, ನವೀನರೆಡ್ಡಿ, ಗುರುನಾಥರೆಡ್ಡಿ, ಮಲ್ಲಪ್ಪ ಮತ್ತು ಗೋಪಾಲರೆಡ್ಡಿ ಆಯ್ಕೆಯಾಗಿದ್ದಾರೆ ಎಂದು ನಾಟಕ ಶಿಕ್ಷಕ, ನಿರ್ದೇಶಕ ಅಶೋಕ ತೊಟ್ನಳ್ಳಿ ತಿಳಿಸಿದ್ದಾರೆ. ಮಕ್ಕಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ, ಮುಖ್ಯಗುರು ಭೀಮಶೆಪ್ಪ ಹುಟ್ಕೂರ್, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣರೆಡ್ಡಿ ಪೊಲೀಸ್ ಪಾಟೀಲ್, ಶಿಕ್ಷಕರಾದ ದೊಡ್ಡ ಕಿಷ್ಟಪ್ಪ, ನೀಲಕಂಠ ನಾಯ್ಕ, ಸುಭಾಷ, ಅಂಜಪ್ಪ ಹಾಗೂ ವೀರಾರೆಡ್ಡಿ ಪಾಟೀಲ್ ಆಡಕಿ, ಚಂದ್ರಶೇಖರರೆಡ್ಡಿ ಆಡಕಿ ಶುಭ ಕೋರಿದ್ದಾರೆ.