ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಜಾಧವ್‌ಗೆ ಸನ್ಮಾನ

Lingaraj Badiger
Updated On : 22 Nov 2013, 11:39 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ನ.21
ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಡಿ.1 ರಂದು ಚಿಂಚೋಳಿ ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಡಾ. ಉಮೇಶ ಜಾಧವ ಅವರನ್ನು ಪರಿಷತ್‌ನ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಶಾಸಕರು ಮಾತನಾಡಿದ ಶಾಸಕ ಜಾದವ್, 12ನೇ ಶತಮಾನದಲ್ಲಿ ಬಾಳು ಬೆಳಗಿದ ಶರಣರ ವಚನಗಳು ಎಲ್ಲೆಡೆ ಪ್ರಚಾರವಾಗಲಿ. ಶರಣ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನಕ್ಕೆ ಹಾರಕೂಡ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಕಾರ್ಯಕ್ರಮವನ್ನು ಗೋ.ರು. ಚೆನ್ನಬಸಪ್ಪ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಬೀದರ ಸಂಸದ ಎನ್.ಧರ್ಮಸಿಂಗ್, ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಸಚಿವರಾದ ವೈಜನಾಥ ಪಾಟೀಲ್, ಸುನೀಲ್ ವಲ್ಯಾಪುರೆ, ಮಾಜಿ ಶಾಸಕರಾದ ಕೈಲಾಸನಾಥ ಪಾಟೀಲ್, ಎಂ.ವೀರಯ್ಯ ಸ್ವಾಮಿ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಎಂದು ಕಾರ್ಯಕ್ರಮದ ಮಾಹಿತಿ ವಿವರಿಸಿದರು.
ಜರ್ನಾಧನರೆಡ್ಡಿ ಪಾಟೀಲ್, ಸುರೇಶ ಕೊರವಿ, ಶ್ರೀನಿವಾಸ ಪಾಟೀಲ್, ಚಿತ್ರಶೇಖರ ಪಾಟೀಲ್, ಭೀಮಶೆಟ್ಟಿ ಮುಕ್ಕಾ, ರಾಜು ನವಲೇ, ವೀರಣ್ಣ ಬೊಮ್ಮನಳ್ಳಿ, ಅಬ್ದುಲ್ ಬಾಸೀತ್, ಡಾ.ತುಕಾರಾಮ ಪವಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement