ನಕಲಿ ವೈದ್ಯರು ಪರಾರಿ
ಅಫಜಲ್ಪುರ: ರಾಜ್ಯಾದ್ಯಂತ ಶುಕ್ರವಾರ ನಡೆದ ನಕಲಿ ವೈದ್ಯರ ತಪಾಸಣಾ ಕಾರ್ಯದಲ್ಲಿ ಜಿಲ್ಲೆಯಲ್ಲಿಯೂ ಅಫಜಲ್ಪುರ ತಾಲೂಕಿನಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಭಾರತಿ ಹಿರೇಮಠ ನೇತೃತ್ವದಲ್ಲಿ ಜಾಗೃತದಳ ಸೇರಿ ತಪಾಸಣೆ ನಡೆಸಿತು.
ಅಫಜಲ್ಪುರದ 7 ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ 3 ಆಸ್ಪತ್ರೆಗಳು ಸರಿಯಾಗಿ ಇವೆ. ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಅವರ ಸೇವೆ ಹಾಗೂ ಅವರ ಪದವಿ ಮುಗಿಸಿದ ಎಲ್ಲವೂ ಸರಿಯಾಗಿ ಇದ್ದವು. ಇನ್ನೂಳಿದ 4 ನಕಲಿ ಆಸ್ಪತ್ರೆಗೆ ಭೇಟಿ ನೀಡಿದಾಗ ಇಲ್ಲಿರುವ ವೈದ್ಯರು ನಾಪತ್ತೆಯಾಗಿದ್ದರು. ಕೇವಲ ಟೇಬಲ್, ಖುರ್ಚಿ, ಔಷಧ ಮಾತ್ರ ಕಾಣುತ್ತಿದ್ದವೂ.
ಯಾವುದೇ ನಕಲಿ ವೈದ್ಯರನ್ನು ಅನಧಿಕೃತವಾಗಿ ಆಸ್ಪತ್ರೆ ನಡೆಸಿದರೆ ಅಂತಹವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕೆಪಿಎಂಇ ಪ್ರಕಾರ ಕಡ್ಡಾಯ ನೋಂದಣಿ ಮಾಡಿಸಿ ರೋಗಿಗಳ ಸೇವೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಾಗೃತ ದಳದ ಸಿಬ್ಬಂದಿ, ವೈದ್ಯಾಧಿಕಾರಿಗಳಾದ ಶ್ರೀಶೈಲ್ ಪಾಟೀಲ್, ಸುಧೀರ ಕುಳಗೇರಿ, ಸಿಕಂದರ್, ಚಿದಾನಂದ ಮೂರ್ತಿ, ನೂರುಲ್ಲಾ ಸೇರಿದಂತೆ ಇತರರು ಇದ್ದರು.