ಕ್ಷೇತ್ರದ ಶಾಸಕರನ್ನು ಆಹ್ವಾನಿಸದೇ ಅವಮಾನ: ಆರೋಪ
ಕೆಂಭಾವಿ: ಪಟ್ಟಣದಲ್ಲಿ ಭಾನುವಾರ ನಡೆದ ಟಿಪ್ಪುಸುಲ್ತಾನ್ ಅವರ ಜನ್ಮ ದಿನಾಚರಣೆ ಹಾಗೂ ವೃತ್ತದ ಉದ್ಘಾಟನೆಗೆ ಕ್ಷೇತ್ರದ ಶಾಸಕ ಗುರು ಪಾಟೀಲ ಅವರನ್ನು ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಕೆಜೆಪಿ ಮುಖಂಡ ಮಷಾಕ್ ಸಾಬ ಸಾಸನೂರ ಅರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಟಿಪ್ಪು ಅವರು ಯಾವುದೇ ಜಾತಿ, ಪಂಥ, ಪಕ್ಷಕ್ಕೆ ಸೀಮಿತರಲ್ಲ. ಭಾರತ ದೇಶದ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಒಬ್ಬ ಮಹಾನ್ ವ್ಯಕ್ತಿ. ಅವರ ಜನ್ಮದಿನಕ್ಕೆ ಸ್ಥಳಿಯ ಸಮಾಜದ ಮುಖಂಡರು, ಯುವಕರು ಪಕ್ಷಪಾತ ಮಾಡಿದ್ದಾರೆ.
ಶಾಸಕರನ್ನು ಆಮಂತ್ರಿಸದೇ ಧರ್ಮ ಕಾರ್ಯದಲ್ಲಿ ರಾಜಕೀಯ ಮಾಡಿರುವುದು ಸರಿಯಲ್ಲ ಎಂದು ಅರೋಪಿಸಿದ್ದಾರೆ. ಮಹ್ಮದ್ ಹನೀಫ, ಬಂದೇನವಾಜ, ಹನೀಫ್ ನಾಸಿ, ಸೈಯದ ಹುಸೇನ್, ಅಮೀರಖಾನ್ ಇನಾಂದಾರ, ಸುಖಾನ ಚೌದ್ರಿ, ಮೈನುದ್ದೀನ್ ಸಾಸನೂರ ಇದ್ದರು.