ಗಡಿ ಕನ್ನಡಿಗರ ನುಡಿ ಉತ್ಸವದಲ್ಲಿ ಮನರಂಜನೆ
ಸೈದಾಪುರ: ಕರವೇ ವತಿಯಿಂದ ಆಯೋಜಿಸಲಾದ ಗಡಿ ಕನ್ನಡಿಗರ ನುಡಿ ಉತ್ಸವ ಕಾರ್ಯಕ್ರಮ ಮಧ್ಯರಾತ್ರಿಯವರಿಗೆ ಜರುಗಿತು. ಗ್ರಾಮದ ಗಣ್ಯರು ಹಾಗೂ ಗ್ರಾಮಸ್ಥರು ಕಲಾವಿದರ ಕಲೆಯನ್ನು ಮೆಚ್ಚಿ ಪ್ರೋತ್ಸಾಹಿಸಿರು.
ಶರಣು ಗದ್ಗುಗೆಯವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ನೃತ್ಯ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಟಿ ಪೂರ್ಣಿಮ ಚಾಲನೆ ನೀಡಿದರು. ನಂತರ ಕರವೇ ವತಿಯಿಂದ ನೀಡಲಾದ ಕನ್ನಡಿಗರ ಸಿರಿ ಪ್ರಶಸ್ತಿ ಸ್ವೀಕರಿಸಿ, ನನಗೆ ತವರಿಗೆ ಬಂದಷ್ಟು ಕುಷಿಯಾಗುತ್ತಿದೆ ಎಂದರು.
ಹಾಸ್ಯ ಕಲಾವಿದ ರಾಚಯ್ಯ, ಆನಂದ ಕಲಾ ತಂಡ, ಅಕ್ಷಯ ನೃತ್ಯ ತಂಡ, ಭಕ್ತ ಕುಂಬಾರ ಜಾದು ತಂಡ ನೆರೆದ ಜನತೆಗೆ ಮನರಂಜನೆ ನೀಡಿತು.