ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗಮನ ಸೆಳೆದ ಬಿತ್ತನೆ ಮಂಡಿ

Lingaraj Badiger
Updated On : 25 Nov 2013, 11:21 am

ಗುಲ್ಬರ್ಗ:  ಸುಧಾರಿತ ಬೇಸಾಯ ಕ್ರಮಗಳು, ಯಂತ್ರೋಪಕರಣ ಬೇಸಾಯ ಪ್ರೋತ್ಸಾಹದ ಅಂಶಗಳನ್ನೇ ಪ್ರಧಾನವಾಗಿ ಒಳಗೊಂಡಿದ್ದ ಇಲ್ಲಿನ ಕೃಷಿ ಮೇಳದಲ್ಲಿ 1 ಮಳಿಗೆಯಲ್ಲಿ ಚಿತ್ತಾರಗಳಿರುವ ಕಟ್ಟಿಗೆ ಮಂಡಿ (ರೈತರ ಬಿತ್ತನೆಗೆ ಬೇಕಾಗುವ ಮಹತ್ವದ ಸಕಲರಣೆ) ಸರ್ವರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಪ್ಲಾಸ್ಟಿಕ್ ಆಯಾ ಗಯಾ, ಓ ಸಬ್ ಡುಪ್ಲಿಕೇಟ್ ಥಾ... ಹಮಾರಾ ಮಂಡಿ (ವುಡನ್) ಹೈ ನಾ, ಯೇ ಅಸಲಿ ಮಂಡಿ ಹೈ ದೇಖೋ... ಎಂದು ಮೊಹ್ಮದ್ ಅಲಿ ಶೇಖ್ ಅಜ್ಜ ಅರಳು ಹುರಿದಂತೆ ಮಾತನಾಡುತ್ತ ಮಂಡಿಗಳೊಂದಿಗೆ ಸರ್ವರ ಗಮನ ಸೆಳೆಯುತ್ತಿದ್ದ.
ಜೋಡಿ ಮಂಡಿಗೆ 1,100 ದಿಂದ 500 ವರೆಗೆ ತರಹೇವಾರಿ ಬೆಲೆಗಳು ಎಂದು ಹೇಳುತ್ತ ಅದರಲ್ಲೇ ಚೌಕಾಸಿ ವ್ಯಾಪಾರ ಯಾಕೆ ನಾನೇ ಸಬ್ಸೀಡಿ ಕೊಡುವೆ ಎಂದು ಪ್ರತಿ ಜೋಡಿ ಮಂಡಿ ಖರೀದಿದಾರರಿಗೆ 100 ಬಿಟ್ಟು ಕೊಡುತ್ತಿದ್ದ.
ಮಂಡಿ ಮಾರಾಟ ತಮ್ಮ ಕುಟುಂಬ ವ್ಯಾಪಾರ ಎನ್ನುವ ಮೌಹ್ಮದ್ ಅಲಿ ಶೇಖ್ ಗುಲ್ಬರ್ಗದ ಹಮಾಲವಾಡಿಯಲ್ಲಿ ಈ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಆಂಧ್ರದ ಕಡಪಾ ಜಿಲ್ಲೆಯಿಂದ ಆರ್ಗ್ಯನ್ ಮರದ ಕಟ್ಟಿಗೆಯಿಂದ ಮಂಡಿಗಳು ಇವರು ತರಿಸಿಕೊಂಡು ಅದಕ್ಕೆ ಕುಸರಿ ಕಲೆ, ರಂಧ್ರಗಳನ್ನು ಹಾಕಿ ಮಾರಾಟ ಮಾಡುವುದರಲ್ಲಿ ಎತ್ತಿದ ಕೈ, ಇವರಿಗೆ ಹಮಾಲವಾಡಿಯಲ್ಲಿ ಮಂಡಿ ಮರ್ಚಂಟ್ ಎಂದೇ ಕರೆಯುತ್ತಾರೆ.
ಪರಂಪರಾಗತ ಮಂಡಿಗಳು ಬೇಕಿದ್ದವರು ಮೊಹ್ಮದ್ ಅಲಿ ಶೇಖ್ ಅಏವರನ್ನು 9900568365 ಗೆ ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement