ನಾಡು ನುಡಿ, ಜಲ ಸಂರಕ್ಷಣೆಗೆ ಸಂಘಟನೆ ಅಗತ್ಯ
ಚಿಂಚೋಳಿ: ಕನ್ನಡ ನಾಡು ನುಡಿ, ಜಲ ಸಂರಕ್ಷಣೆಗಾಗಿ ಕನ್ನಡ ರಕ್ಷಣೆ ಪಡೆ ಸ್ಥಾಪಿಸುವುದು ತುಂಬಾ ಅಗತ್ಯವಾಗಿದೆ ಎಂದು ಹೈ.ಕ. ಹೋರಾಟ ಸಮಿತಿ ಯುವ ಮುಖಂಡ ಗೌತಮ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಜಯ ಕರ್ನಾಟಕ ರಕ್ಷಣಾ ಘಟಕ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕನ್ನಡ ನುಡಿ ಹಬ್ಬ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಕ್ಷಣಾ ಪಡೆ: ಚಿಂಚೋಳಿ ತಾಲೂಕ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿದೆ ಆಂಧ್ರ ಗಡಿಭಾಗಕ್ಕೆ ಅನೇಕ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕನ್ನಡ ರಕ್ಷಣಾ ಪಡೆ ರಚಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಅವರು ತಿಳಿದರು. ಪಟ್ಟಣ ಪಂಚಾಯತ ಉಪಾಧ್ಯಕ್ಷ ಶಾಮರಾವ್ ಕೊರವಿ ಮಾತನಾಡಿ, ತಾಲೂಕಿನ ಕುಂಚಾವರಂ ಗಡಿಭಾಗದಲ್ಲಿ ಅನೇಕ ಗ್ರಾಮಗಳಲ್ಲಿ ಅನೇಕ ಕನ್ನಡಿಗರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ತಾಲೂಕಿನ ಕಲ್ಲೂರ ಮತ್ತು ಛತ್ರಸಾಲ ಗ್ರಾಮಗಳ ಬಳಿ ಸ್ಥಾಪನೆಗೊಂಡಿರುವ ಸಿಮೆಂಟ್ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಸರೋಜನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರ, ಯುವ ಸಾಹಿತಿ ಎಸ್.ಎನ್. ದಂಡಿನಕುಮಾರ, ಪಪಂ ಸದಸ್ಯ ಅಬ್ದುಲ್ ಬಸೀತ್, ರೇವಣಸಿದ್ದಯ್ಯ ಸ್ವಾಮಿ ನರನಾಳ, ಮತ್ತು ಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಸವರಾಜ ವಾಡಿ ಮಾತನಾಡಿದರು. ರಂಗಕಲಾವಿದ ಶಂಕರ ಹಿಪ್ಪರಗಿ ಸ್ವಾಗತಿಸಿ, ವಂದಿಸಿದರು. ರಂಗ ಮತ್ತು ಹಾಸ್ಯ ಕಲಾವಿದರಾದ ಜೂ. ರಾಜಕುಮಾರ್, ಮಾಲಗತಿ, ಸುದೀಪ್, ರಾಚಯ್ಯ ಸ್ವಾಮಿ ಮರೆಪ್ಪಾ ಭಜಂತ್ರಿ ಹಾಸ್ಯ ರಸಮಂಜರಿ ನಡೆಸಿಕೊಟ್ಟರು.
--
ಎಲ್ಲದಕ್ಕೂ ಸೈ ಅನ್ನುವ ಸೈದಾಪುರ: ಗದ್ದುಗೆ
ಸೈದಾಪುರ: ಕರವೇ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾದಿಕಾರ ಸಹಯೋಗದೊಂದಿಗೆ ಆಯೋಜಿಸಲಾದ ಗಡಿ ಕನ್ನಡಿಗರ ನುಡಿ ಉತ್ಸವ ಕಾರ್ಯಕ್ರಮಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಉದ್ಘಾಟನೆ ಹಾಗೂ ಯಾದಗಿರಿ ಎಪಿಎಂಸಿ ಧ್ಯಕ್ಷ ಭೀಮಣ್ಣಗೌಡ ಪಾಟೀಲ ಕ್ಯಾತನಾಳ ಅವರ ಜ್ಯೋತಿ ಬೆಳಗಿ ಚಾಲನೆ ನೀಡಿದರು.
ಉತ್ತರ ಕರವೇ ಅಧ್ಯಕ್ಷ ಶರಣು.ಬಿ.ಗದ್ದುಗೆ, ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷೆ ರಾಧಮ್ಮ ಭಾಗಪ್ಪಕೋರೆ, ನ್ಯಾಯವಾದಿ ಭೀಮರಡ್ಡಿ ಪಾಟೀಲ ಶೆಟ್ಟಳ್ಳಿ, ಬಸವರಾಜಯ್ಯ ಸ್ವಾಮಿ ಬದ್ದೆಪಲ್ಲಿ, ವಲಯ ಕಸಾಪ ಅಧ್ಯಕ್ಷ ಸಿದ್ದಲಿಂಗಯ್ಯಸ್ವಾಮಿ, ನ್ಯಾಯವಾದಿ ಮಹಿಪಾಲರಡ್ಡಿ ದುಪ್ಪಲ್ಲಿ, ಪಿಎಸ್ಐ ಬಸವರಾಜ , ಜಿ.ಪಂ. ಸದಸ್ಯ ಭೀಮರಾಯ ಕಂದಕೂರ, ಶಾಂತಕುಮಾರ, ರಾಯಚೂರ ಜಿಲ್ಲಾ ಕರವೇ ಅಧ್ಯಕ್ಷ ಅಶೋಕಕುಮಾರ ಜೈನ ಉಪಸ್ಥಿತರಿದ್ದರು ಜಿಲ್ಲಾ ಕರವೇ ಅಧ್ಯಕ್ಷ ಶರಣು ಇಟಿಗಿ. ತಾಲೂಕಾ ಅಧ್ಯಕ್ಷ ದೇವುಪಾಟೀಲ. ಶಹಾಪುರ ತಾಲೂಕು ಅಧ್ಯಕ್ಷ ವೆಂಕಟೇಶ ಬೆಲೋರ. ಕಾರ್ಯದರ್ಶಿ ಗೌಡಪ್ಪ ಕೋರಿ, ರವಿತಳಿಬಿಡಿ, ಹಾಗೂ ಕರವೇ ಕಾರ್ಯಕರ್ತರು, ಗ್ರಾಮಸ್ಥರು ಭಾಗವಸಿದ್ದರು. ನರಸಪ್ಪ ನಾರಾಯಣ ನಿರೂಪಿಸಿದರು.