ಆಳಂದದಲ್ಲಿ ಪಾಲಿಟೆಕ್ನಿಕ್, ಐಟಿಐ ಸ್ಥಾಪನೆಗೆ ಒತ್ತಾಯ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಆಳಂದ, ನ.25
ಪಟ್ಟಣದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ) ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕೋಡಲಂಗರಗಾ ಜೈಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷ ಕಿರಣಕುಮಾರ್ ಆರ್. ಗುತ್ತೇದಾರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣ, ರಜ್ವಿರೋಡ್ ರಸ್ತೆಯ ಮೂಲಕ ಮೆರವಣಿಗೆ ಕೈಗೊಂಡು ತಹಸೀಲ್ದಾರ್ ಪರವಾಗಿ ಶಿರಸ್ತೇದಾರ ಶರಣಪ್ಪ ಮೋಘಾ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ತಾಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ಕೈಗಾರಿಕೆ ತರಬೇತಿ ಕೇಂದ್ರ ಪಾಲಿಟಿಕ್ನಿಕ್ ಕಾಲೇಜು ಕೊರತೆಯಿಂದ ಬಡವಿದ್ಯಾರ್ಥಿಗಳಿಗೆ ದೂರದ ನಗರ ಪ್ರದೇಶಗಳಿಗೆ ಹೋಗಿ ಕಲಿಯಲಾಗುತ್ತಿಲ್ಲ ಎಂದರು.
ತಾಲೂಕಿನಲ್ಲಿ 130 ಗ್ರಾಮಗಳ ಪೈಕಿ ಒಟ್ಟು 45 ಪ್ರೌಢಶಾಲೆಗಳಿದ್ದು, ಕಾಲೇಜು ಆರಂಭಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ ಕಾರ್ಯಕರ್ತರು ಬರುವ ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದರು.
ವೇದಿಕೆ ಉಪಾಧ್ಯಕ್ಷ ಶಾಂತಯ್ಯ ಸ್ವಾಮಿ, ಕಾರ್ಯದರ್ಶಿ ಅನಿಲ್ ಗುತ್ತೇದಾರ, ಅನೀಲ್ ಪೂಜಾರಿ, ಬಂಡಪ್ಪ ಹೂಗಾರ, ಎಸ್.ಕೆ.ಪ್ರಕಾಶ, ಅಶೋಕ ಜಮಾದಾರ, ಮಲ್ಲಿಕಾರ್ಜುನ ನಗದೆ, ಮಲ್ಲು ಕುಂಬಾರ, ರಾಜು ದಡಕೆ, ರಾಜು ಜಮಾದಾರ, ರಾಜು ಗುತ್ತೇದಾರ, ದಿಲೀಪ ಜಮಾದಾರ, ಹಣಮಂತ ಬೋಧನ, ಡಾ.ಅಶೋಕ, ಜಗದೀಶ ವಾಡೆ, ರವಿ ಆಳಂದ, ರಾಜು ನಡಗೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.