ಕೊಪ್ಪಳ- ಗುಲ್ಬರ್ಗಕ್ಕೆ ಅಲ್ಪಸಂಖ್ಯಾತ ವಸತಿ ಶಾಲೆ ಮಂಜೂರು
ಸರ್ಕಾರ ಕಳೆದ ಅ.5ರ ತನ್ನ ಆದೇಶದಲ್ಲಿ ಕೊಪ್ಪಳ ಹಾಗೂ ಗುಲ್ಬರ್ಗ ಜಿಲ್ಲೆಗಳಿಗೆ ಅಲ್ಪಸಂಖ್ಯಾತರ ವಸತಿ ಶಾಲೆಗಳನ್ನು ಮಂಜೂರು ಮಾಡಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಎಂಎಲ್ಸಿ ಅಲ್ಲಂಪ್ರಭು ಪಾಟೀಲ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು 2013- 14ನೇ ಸಾಲಿನಲ್ಲಿ ವಸತಿ ಶಾಲೆಗಳು ಇಲ್ಲದ ಹೋಬಳಿಗೆ ಒಂದರಂತೆ ಎಸ್ಸಿ-30 ಹಾಗೂ ಎಸ್ಟಿ-15 ಶಾಲೆಗಳನ್ನು ಮಂಜೂರು ಮಾಡಲು ಆಯವ್ಯಯ ಭಾಷಣದಲ್ಲಿ ಘೋಷಣೆ ಮಾಡಲಾಗಿದೆ.
ನಿವೇಶನ ಲಭ್ಯವಿರುವ ಕಡೆಗಳಲ್ಲಿ ಶಾಲೆಗಳನ್ನು ಆರಂಭಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಆಂಜನೇಯ ಹೇಳಿದ್ದಾರೆ.