ಕ್ಷುಲ್ಲಕ ಕಾರಣಕ್ಕೆ ಜಗಳ; ಹತ್ಯೆಯಲ್ಲಿ ಅಂತ್ಯ
ಗುಲ್ಬರ್ಗ: ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆಯಾದ ಘಟನೆ ಸೋಮವಾರ ಸಂಭವಿಸಿದೆ.
ಬ್ರಹ್ಮಪುರದ ನಿವಾಸಿ ಲಿಂಗಪ್ಪ (27) ಎಂದು ಗುರುತಿಸಲಾಗಿದೆ. ಲಿಂಗಪ್ಪ ಮತ್ತು ಆನಂದ ಹೆಬ್ಬಾಳ ಇಬ್ಬರು ಸ್ನೇಹಿತರು ಮದ್ಯಪಾನ ಮಾಡುವ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು ಆನಂದ ಎಂಬಾತ ಬಡಿಗೆಯಿಂದ ಹೊಡೆದ ಪರಿಣಾಮ ಲಿಂಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕೊಲೆ ಮಾಡಿದ ಆರೋಪಿ ಆನಂದ ಹೆಬ್ಬಾಳನನ್ನು ಬ್ರಹ್ಮುಪುರ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಎಸ್ಪಿ, ಪಿಐ ಮತ್ತು ಪಿಎಸ್‌ಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.