ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈತರ ತೊಗರಿ ಬೆಳೆ ಕಿಡೆ ಹತೋಟಿಗೆ ಸಲಹೆಗಳು

Mainashree
Updated On : 26 Nov 2013, 11:29 am

ಚಿತ್ತಾಪುರ: ತಾಲೂಕಿನಲ್ಲಿ ತೊಗರಿ ಬೆಳೆಯು ಹೂವಾಡುವ ಹಂತದಲ್ಲಿದ್ದು, ಈ ಸಮಯದಲ್ಲಿ ಬೆಳೆಯ ರಕ್ಷಣೆಗೆ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಿದಲ್ಲಿ ಕೀಟಗಳ ಹಾವಳಿ ಕಡಿಮೆಯಾಗಿ ಅಧಿಕ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ಕನಕ ತಿಳಿಸಿದ್ದಾರೆ.
ತೊಗರಿ ಬೆಳೆಯು ಹೂವಾಡುವ ಹಂತದಲ್ಲಿದ್ದು, ಹೂಗಳು ಬಹಳ ಮೃದುವಾಗಿದ್ದು, ಈ ಬೆಳೆಗೆ ಇಮಾಮೇಕ್ಟಿನ್ ಬೆಂಜೊಯೋಟ್ ಕೀಟನಾಶಕವನ್ನು ಮೊದಲನೆ ಸಿಂಪರಣಿಯಾಗಿ ಬಳಸಬಾರದು. ಇತ್ತೀಚಿನ ತಂಪು ವಾತವರಣ ಮತ್ತು ಮಂಜು ಬೀಳುವುದರಿಂದ ಹೂಗಳು ಉದುರುತ್ತಿರುವುದರಿಂದ ಪ್ಲಾಸೋಪಿಕ್ಸ್ 0.5 ಮೀ.ಲೀ ಮತ್ತು ಯುರಿಯಾ 20 ಗ್ರಾಮ ಮತ್ತು ಜಿಲೇಟೆಡ್ ಜಿಂಕ್ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೇರಸಿ ಸಿಂಪರಣಿ ಮಾಡುವುದರಿಂದ ಹೂ ಉದುರುವುದು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
ಕಿಡೆಗಳ ಹತೋಟಿಗೆ ಕ್ರಮಗಳು
1. ಮೊದಲನೆ ಸಿಂಪರಣೆಯಾಗಿ ಶೇ.50ರಷ್ಟು ಹೂವಾಡುವಾಗ ತತ್ತಿನಾಶಕ ಪ್ರೋಪೆನೋಪಾಸ್ 2.0 ಮೀ.ಲೀ. ಅಥವಾ ಮಿಥೋಮಿಲ 0.6 ಗ್ರಾಂ ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಿ
2. ಎರಡನೇ ಸಿಂಪರಣೆಯಾಗಿ ಸಂಪೂರ್ಣ ಹೂವಾಡುವಾಗ ಶೇ.5ರಷ್ಟು ಬೇವಿನ ಕಷಾಯ 2.ಮೀ.ಲೀ. ಅಥವಾ ರಿನಾಕ್ಷೀಪಿಯರ್ ಕೊರಾಜಿನ 0.15 ಮೀ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
3. ಮೂರನೇ ಸಿಂಪರಣಿಯಾಗಿ ತೊಗರಿ ಕಾಯಿ ಕಟ್ಟುವ ಹಂತದಲ್ಲಿ ಫ್ಲೂಬೆಂಡಿಯೋವೈಡ್ 0.1 ಮೀ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
4. ನಾಲ್ಕನೆಯ ಸಿಂಪರಣೆಯಾಗಿ ಕಾಯಿಬಲಿಯುವ ಹಂತದಲ್ಲಿದ್ದಾಗ ಇಂಡಾಕ್ಸಾಕಾರ್ಬ 0.3 ಮೀ.ಲೀ ಅಥವಾ ಇಮಾಮೆಕ್ಟನ್ ಬೆಂಜೋಯೊಟ್ 0.2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ರೈತರು ಈ ಕೀಟನಾಶಕಗಳನ್ನು ಬಳಸಿದಲ್ಲಿ ಖರ್ಚು ಕಡಿಮೆ ಬರುವುದಲ್ಲದೆ, ಕಿಡೆ ಹತೋಟಿ ಮಾಡಿ ಹೆಚ್ಚಿಗೆ ಇಳುವರಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement