ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ಅಹವಾಲು ಸ್ವೀಕಾರ

Lingaraj Badiger
Updated On : 28 Nov 2013, 11:45 am

ಗುಲ್ಬರ್ಗ:  ಗುಲ್ಬರ್ಗ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ನ.28 ರಿಂದ 30 ರವರೆಗೆ ಭೇಟಿ ನೀಡಿ ಬೆಳಗಿನ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ.
ಕುಂದುಕೊರತೆ, ದೂರಿನ ಬಗ್ಗೆ ಅರ್ಜಿಗಳನ್ನು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ. ದೂರು ಸಲ್ಲಿಸಲು ಬೇಕಾಗುವ ಅರ್ಜಿ ನಮೂನೆ ಪ್ರಪತ್ರ ಸಂ.1 ಮತ್ತು 2 ಅನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಅಹವಾಲು ಸ್ವೀಕರಿಸುವ ಅಧಿಕಾರಿಗಳ ಹೆಸರು ಹಾಗೂ ಹುದ್ದೆ, ಭೇಟಿ ನೀಡುವ ಸ್ಥಳ ಮತ್ತು ದಿನಾಂಕ ಹಾಗೂ ಅಹವಾಲು ಸ್ವೀಕರಿಸುವ ಸ್ಥಳ ಇಂತಿದೆ.
ಲೋಕಾಯುಕ್ತ ಡಿಎಸ್ಪಿ ಜಿ.ಜಿ.ಮರಿಬಾ ಶೆಟ್ಟಿ: ಅಫಜಲ್ಪುರ, ನ.28ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಅಫಜಲ್ಪುರ ಹಾಗೂ ಜೇವರ್ಗಿ 30ರಂದು ಲೋಕೋಪಯೋಗಿ ಪ್ರವಾಸಿಮಂದಿರ ಜೇವರ್ಗಿ. ಲೋಕಾಯುಕ್ತ ಪಿ.ಐ. ಜೇಮ್‌ಲಾಯ್ ಕ್ಸೇವಿಯರ್ ಮಿನೇಜೆಸ್: ಸೇಡಂ 28ರಂದು ಸೇಡಂ ಲೋಕೋಪಯೋಗಿ ಪ್ರವಾಸಿಮಂದಿರ, ಆಳಂದ 29ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಆಳಂದ. ಲೋಕಾಯುಕ್ತ ಪಿ.ಐ.ಶಾಂತಿನಾಥ ಬಿ.ಪಿ.: ಚಿಂಚೋಳಿ, 29ರಂದು ಲೋಕೋಪಯೋಗಿ ಹಳೆ ಪ್ರವಾಸಿಮಂದಿರ ಚಿಂಚೋಳಿ.  ಲೋಕಾಯುಕ್ತ ಪಿ.ಐ.ತಮ್ಮರಾಯ ಪಾಟೀಲ್ ಚಿತ್ತಾಪುರ 30ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಚಿತ್ತಾಪುರ. ವಿವರಗಳಿಗೆ ಸಾರ್ವಜನಿಕರು ಲೋಕಾಯುಕ್ತ ಆರಕ್ಷಕ ಅಧೀಕ್ಷಕರ ಕಚೇರಿ, ಐವಾನ್-ಇ-ಶಾಹಿ ಕಾಂಪೌಂಡ್ ಗುಲ್ಬರ್ಗ-585102, ದೂ.ಸಂ. 08472-263645, 263684 ಇಲ್ಲಿಗೆ ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement