ಜಮೀನು ವಿವಾದ: ಒಬ್ಬನ ಕೊಲೆ, ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ
ಗುಲ್ಬರ್ಗ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಆಳಂದ ತಾಲೂಕಿನ ನಾಗಲೇಗಾಂವ್ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಪ್ರಕರಣದಲ್ಲಿ ಇನ್ನೂ ನಾಲ್ಕು ಜನ ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಿದ್ರಾಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶರಣಪ್ಪ, ಚಂದ್ರಕಾಂತ, ಚಂದ್ರಾಮ ಮತ್ತು ಸಿದ್ದರಾಮ ಕಲಶೆಟ್ಟಿ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರೋಳ್ಳಿ ಸಿಮಾಂತರ ಹೊಲಕ್ಕೆ ಸಂಬಂಧಿಸಿದಂತೆ ತಕರಾರು ಬಗೆಹರಿಸಿಕೊಳ್ಳಲು ಸಿದ್ದರಾಮ ಗೋಡಕೆ, ನಾಮದೇವ ಗೋಕಡೆ, ದತ್ತಾತ್ರೇಯ ಗೋಡಕೆ, ಸುವರ್ಣ, ಶಾರದಾ ಬಾಯಿ, ರಮಾಬಾಯಿ, ಸರುಬಾಯೆ ಸೇರಿ ನಾಮದೇವ ಗೋಡಕೆ ಅವರ ಹಳೆಯ ಮನೆಯ ಹತ್ತಿರ ಸಿದ್ರಾಮಪ್ಪ ಇತರರನ್ನು ಕರೆದುಕೊಂಡು ಹೋಗಿ ತಕರಾರು ಬಗೆಹರಿಸಿಕೊಳ್ಳುವ ಸಂದರ್ಭ ಜಗಳ ನಡೆದಿದೆ.
ಸಿದ್ರಾಮಪ್ಪ ಕೊಡಲಿಗೆಯಿಂದ ಹಲ್ಲೆ ನಡೆಸಿದ್ದ ಪರಿಣಾಮ ಆತ ಸ್ಧಳದಲ್ಲಿಯೇ ಮೃತಪಟ್ಟಿದ್ದಾನೆ. ಚಂದ್ರಕಾಂತ, ಚಂದ್ರಾಮ ಮತ್ತು ಸಿದ್ದರಾಮ ಕಲಶೆಟ್ಟಿ ಅವರ ಕೊಲೆಗೆ ಯತ್ನಿಸಲಾಗಿದ್ದು, ಅವರು ತೀವ್ರ ಗಾಯಗೊಂಡು, ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.