ಶ್ರೀಗೆ ಕೊಲೆ ಬೆದರಿಕೆ ಖಂಡಿಸಿ ಪ್ರತಿಭಟನೆ
ಗುಲ್ಬರ್ಗ: ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಬೇಕು ಮತ್ತು ಕಾಯ್ದೆ ಜಾರಿಗಾಗಿ ಒತ್ತಾಯಿಸುತ್ತಿರುವ ನಿಡುಮಾಮಿಡಿ ಶ್ರೀಗಳಿಗೆ ಕೊಲೆ ಬೆದರಿಕೆ ಹಾಕಿರುವ ಕ್ರಮ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಸಮಿತಿಯ ಅರ್ಜುನ ಭದ್ರೆ ಮತ್ತು ರವಿ. ಎಂ. ಮದನಕರ್ ನೂರಾರು ಕಾರ್ಯಕರ್ತರು ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಮೂಡನಂಬಿಕೆ ತಾಂಡವವಾಡುತ್ತಿದ್ದು, ಈ ಮೂಡನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು. ಭೀಮಶಾ ಖನ್ನಾ, ರಾಯಪ್ಪ ಪೂಜಾರಿ, ಮಹಾದೇವ ಕೋಳ್ಕೂರ್, ಶಾಮರಾವ್ ಸಿಂಧೆ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.