ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರದಲ್ಲಿ ಜೈ ಕರ್ನಾಟಕ ರಥಕ್ಕೆ ಸ್ವಾಗತ

Lingaraj Badiger
Updated On : 28 Nov 2013, 11:51 am

ಸುರಪುರ: ರಾಜ್ಯದಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಜೈ ಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ರಥಯಾತ್ರೆಗೆ ಇಲ್ಲಿಯ ಗಾಂಧೀಜಿ ವೃತ್ತದಲ್ಲಿ ಸಂಘಟನೆಯ ತಾಲೂಕು ಘಟಕದ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ನಾಯಕ ಮಾತನಾಡಿ, ರಾಜ್ಯದಲ್ಲಿ ಏಕ ರೂಪ ಶಿಕ್ಷಣ ನೀತಿ ಇಲ್ಲವಾಗಿದೆ. ವಿಭಾಗದಿಂದ ವಿಭಾಗಕ್ಕೆ ಶಿಕ್ಷಣದ ನೀತಿ ಇಬ್ಬಗೆ ಧೋರಣೆ ಹೊಂದಲಾಗಿದೆ ಎಂದರು ಆರೋಪಿಸಿದರು. ರಾಜ್ಯದಲ್ಲಿ ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ನೀತಿ ದ್ವಿಮುಖವಾಗಿದೆ. ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಏಕ ರೂಪ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಬೇಕು. ಎಲ್ಲರಿಗೂ ಸಮಾನವಾದ ಶಿಕ್ಷಣ ಸಿಗುವಂತಾಗಬೇಕು ಎಂದರು.
ಸೇವಾ ಪ್ರಶಸ್ತಿ ಪುರಸ್ಕಾರ ಪ್ರದಾನ
ಕೆಂಭಾವಿ: ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕೊಡಮಾಡುವ ಗ್ರಂಥಾಲಯ ಸೇವಾ ಪ್ರಶಸ್ತಿ ಪುರಸ್ಕಾರ ಈ ಬಾರಿ ಕೆಂಭಾವಿಯ ಗ್ರಂಥಾಲಯ ಮೇಲ್ವಿಚಾರಕ ಎಂ.ಎ. ಮುಲ್ಲಾ ಅವರಿಗೆ ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಭೆಯಲ್ಲಿ ನೀಡಲಾಯಿತು. ಎಂ.ಎ. ಮ್ಮುಲ್ಲಾ ಅವರಿಗೆ ಗ್ರಂಥಾಲಯ ಸೇವಾ ಪುರಸ್ಕಾರ ದೊರೆತದ್ದಕ್ಕೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮುಲ್ಲಾ ಅವರು ಸೇವೆ ಉತ್ತಮವಾಗಿದ್ದು, ಅವರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಉತ್ತಮ ಕೆಲಸ ಎಂದು ಗ್ರಾಪಂ ಸದಸ್ಯ ರಂಗಪ್ಪ ವಡ್ಡರ ಹರ್ಷ ವ್ಯಕ್ತ ಪಡೆಸಿದ್ದಾರೆ.
ದಸಂಸ ಪದಾಧಿಕಾರಿಗಳು
ಸುರಪುರ:  ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಮಹೇಂದ್ರಕುಮಾರ ಬಿಲ್ಲವ್ ಹಸನಾಪುರ (ಅಧ್ಯಕ್ಷ), ಭೀಮಣ್ಣ ಖಂಡ್ರೆ (ಕಾರ್ಯಾಧ್ಯಕ್ಷ), ಮಲ್ಲಿಕಾರ್ಜುನ ಸೂಗೂರು (ಕಾರ್ಯದರ್ಶಿ), ಬಾಬು ಬಾಂಬೇಕರ್ (ಸಂಘಟನಾ ಕಾರ್ಯದರ್ಶಿ), ಲಲಿತ ಭಂಡಾರಿ (ಸಹ ಕಾರ್ಯದರ್ಶಿ), ಸುಭಾಷ್ (ಕಾನೂನು ಸಲಹೆಗಾರ), ಭೀಮಣ್ಣ ಕಂಡಕ್ಟರ್ (ಖಜಾಂಚಿ) ಆಯ್ಕೆಯಾಗಿದ್ದಾರೆ.
ಮಕ್ಕಳ ಪ್ರತಿಭೆ  ಗುರ್ತಿಸಿ
ಕೆಂಭಾವಿ: ಸಮೀಪದ ದುಮ್ಮದ್ರಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ 2013-14ನೇ ಸಾಲಿನ ವಡಗೇರಾ ವಲಯ ಮಟ್ಟದ ಮಕ್ಕಳ ಪ್ರತಿಭಾ ಕಾರಂಜಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಲನಗೌಡ ಸನ್ನತಿ ನೆರವೇರಿಸಿದರು. ಮಕ್ಕಳಲ್ಲಿರುವ ಅಡಗಿರುವ ಕಲೆಯನ್ನು ಹೊರಹಾಕುವುದರ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸುವಂತಹ ಕಾರ್ಯಕ್ರಮವಾಗಿದೆ. ಪ್ರತಿಭೆ ಇರುವ ಮಕ್ಕಳಿಗೆ ಪ್ರೋತ್ಸಾಹ ನೀಡಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement