ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನ

Lingaraj Badiger
Updated On : 29 Nov 2013, 10:41 am

ಗುಲ್ಬರ್ಗ: ನಗರ ಕೇಂದ್ರ ಗ್ರಂಥಾಲಯ ಅದೀನದಲ್ಲಿ ಬರುವ ಕೇಂದ್ರ ಬಸ್ ನಿಲ್ದಾಣ ಶಾಖೆಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟಿಸಲಾಯಿತು.
ಎನ್‌ಇಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಚ್. ನಾಗೇಶ ಹೊಸ ಸದಸ್ಯರನ್ನು ಮಾಡುವ ಮೂಲಕ ಉದ್ಘಾಟಿಸಿ, ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಉಕ್ತಿಯಂತೆ ಪ್ರತಿಯೊಬ್ಬರೂ ದೇಶ ಸುತ್ತಲಿಕ್ಕಾಗದೆ ಇದ್ದರೂ ಪುಸ್ತಕವನ್ನಾದರೂ ಓದಬೇಕು. ಇದರಿಂದ ಮನಸ್ಸಿಗೆ ಸಂತೃಪ್ತಿ, ಆನಂದ, ಉಲ್ಲಾಸ ಜತೆಗೆ ಜ್ಞಾನ ಬೆಳೆಯುತ್ತದೆ ಎಂದರು.
ಎಂ.ಎ. ಮುಲ್ಲಾ, ಪಿ.ಎಸ್. ವಸ್ತ್ರದ, ಬಸವಂತಪ್ಪ, ಡಿ.ಎಸ್. ಕೇಸರಿ, ಅನೀಲ್ ಬಿರಾದಾರ, ಚಂದ್ರೇಶ, ಸುಭಾಷ ಇತರರು ಉಪಸ್ಥಿತರಿದ್ದರು. ಮಂಜುಳಾ ಸ್ವಾಗತ ಗೀತೆ ಹಾಡಿದರು. ಸುನೀಲ್ ಮುದಗಲ್ಲ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement