ಚಿಣ್ಣರ ಚಿಲಿಪಿಲಿ ವಸ್ತು ಪ್ರದರ್ಶನ
ಗುಲ್ಬರ್ಗ: ನಗರದ ಶಹಾಬಜಾರ ಬಡಾವಣೆಯ ನವೋದಯ ವಿದ್ಯಾಮಂದಿರ ಶಾಲೆಯಲ್ಲಿ ಈಚೆಗೆ ಚಿಣ್ಣರ ಚಿಲಿಪಿಲಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಪ್ರೋತ್ಸಾಹಿಸಿ, ಅವರ ಶ್ರೇಯೋಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಪಾತ್ರ ಮತ್ತು ಪಾಲಕರ ಜವಾಬ್ದಾರಿಯನ್ನು ಮಹತ್ವಪೂರ್ಣವಾಗಿದೆ ಎಂದರು.
ಬಿ.ಎಸ್. ಬಿರಾದಾರ, ಸಿದ್ದಲಿಂಗ ಕುಲಕರ್ಣಿ, ಸಿಆರ್ಸಿ ಉತ್ತರ ವಲಯದ ಅಂಬಣ್ಣ ಬಿರಾದಾರ, ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಎಸ್. ಕೋಗನೂರ್, ಮಲ್ಲಿಕಾರ್ಜುನ ಕೋಗನೂರ್, ಸಂಗಣಗೌಡ ಪಾಟೀಲ್, ಶಾಂತಪ್ಪ ಖಣದಾಳ, ಲಿಂಗರಾಜ ಸಾಲಿಮಠ, ನಾರಾಯಣರೆಡ್ಡಿ ಪೋತಲ್, ಚನ್ನು ನೆನೆಗಾರ್, ಮುಖ್ಯಗುರು ಅಶೋಕ ಲೋಡ್ಡನ್, ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು. ಅನ್ನಪೂರ್ಣ ಸ್ವಾಗತಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು. ಅಂಬಿಕಾ ವಂದಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪ್ರಮಿಳಾಬಾಯಿ ವಿ. ದಿಗ್ಗಾಂವಿ ಅವರನ್ನು ಸನ್ಮಾನಿಸಲಾಯಿತು.