ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೆಬ್ಬಾಳ ಗ್ರಾಪಂಗೆ ಬೀಗ ಮುದ್ರೆ: ಡಿಎಸ್‌ಎಸ್

Vishwanath S
Updated On : 1 Dec 2013, 12:46 pm

ಹುಣಸಗಿ: ಸಮೀಪದ ಹೆಬ್ಬಾಳ(ಬಿ.) ಗ್ರಾಪಂ ಕಾರ್ಯಾಲಯಕ್ಕೆ ಕರ್ನಾಟಕ ದಲಿತ ಸಂಘರ್ಷ (ಭೀಮಾವಾದ) ಸಮಿತಿ ಡಿ. 9 ಸೋಮವಾರ ತನ್ನ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಪಂಗೆ ಬೀಗ ಜಡಿಯಲು ನಿರ್ಧರಿಸಿದೆ.
ಸಾಕಷ್ಟು ಬಾರಿ ಮನವಿ ಮಾಡಿದಾಗಲೂ ಗ್ರಾಪಂ ಹಾಗೂ ಜಿಪಂ, ತಾ.ಪಂ, ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸಲು ವಿಫಲರಾಗಿದ್ದರಿಂದ ಬೀಗಮುದ್ರೆ ಹಾಕಲು ನಿಶ್ಚಯಿಸಲಾಗಿದೆ ಎಂದು ಹುಣಸಗಿ ಹೋಬಳಿ ದಸಂಸ ಸಂಚಾಲಕ ಪ್ರಭು ಕಚಕನೂರು ತಿಳಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲು ಇರಿಸಿದ್ದ ಜಾಗದಲ್ಲಿ ಅನಧಿಕೃತವಾಗಿ ಮನೆ ಕಟ್ಟಲು ಸಿದ್ಧತೆ ನಡೆಸಿರುವ ಕುರಿತು ತಿಳಿದು ಬಂದಿದೆ. ಅಂಬೇಡ್ಕರ್ ಭವನ ನಿರ್ಮಾಣ ದಿನದಿಂದ ದಿನಕ್ಕೆ ವಿಳಂಬವಾಗುತ್ತಲಿದೆ. ಶುದ್ಧ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ತೆಗೆದುಕೊಳ್ಳಬೇಕಾದ ಪಂಚಾಯತ್ ಸಿಬ್ಬಂದಿ, ಕುಡಿವ ನೀರಿನ ಸ್ವಚ್ಛತೆಯನ್ನು ಕಾಪಾಡಲು ವಿಫಲವಾಗಿದ್ದಾರೆ.
ಇದರಿಂದ ಗ್ರಾಮದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುವ ರೀತಿ ಭಾಸವಾಗುತ್ತಿದೆ. ಈ ಕುರಿತು ಗಮನ ಸೆಳೆಯಬೇಕಾದ  ಸ್ಥಳಿಯ ಸರ್ಕಾರಿ ವೈದ್ಯಾಧಿಕಾರಿಗಳು ಕೂಡಾ ಈ ಕುರಿತು ಪಂಚಾಯತ್‌ಗೆ ಸೂಕ್ತ ತಿಳುವಳಿಕೆ ನೀಡುವಲ್ಲಿ ವಿಫಲರಾಗಿದ್ದಾರೆ. ಇದನ್ನು ಮನಗಂಡು ಗ್ರಾಪಂಗೆ ಬೀಗ ಮುದ್ರೆ ಹಾಕಲು ದಸಂಸ(ಭೀಮಾವಾದ) ನಿಶ್ಚಯಿಸಿದೆ. ಕಾರಣ ಪಂಚಾಯತ್ ವ್ಯಾಪ್ತಿಯ ಸಮಸ್ತ ಕಲ್ಲದೇವನಹಳ್ಳಿ ಗ್ರಾಮಸ್ತರು ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಪ್ರಭು ಕಚಕನೂರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement