ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ

Vishwanath S
Updated On : 2 Apr 2014, 11:33 am

ಕನ್ನಡಪ್ರಭ ನಾರ್ತೆ  ಶಹಾಬಾದ್  ಏ.1
ಖರ್ಗೆಯವರ ರೈಲು ನಿಂತು ಹೋಗಿದೆ ಎಂದು ಹೇಳುವ ಬಿಜೆಪಿಯವರು ರೈಲು ಹಳಿಯ ಮೇಲೆ 2 ನಿಮಿಷ ನಿಂತು ನೋಡಲಿ. ಎಲ್ಲಾ ಕಾಯಿಲೆಗಳನ್ನು ಗುಣ ಪಡಿಸಲು ಔಷಧವಿದೆ. ಆದರೆ ಹೊಟ್ಟೆಕಿಚ್ಚು ಎಂಬ ಕಾಯಿಲೆಗೆ ಯಾವುದೇ ಔಷಧವಿಲ್ಲ. ಈ ಕಾಯಿಲೆಗೆ ಔಷಧ ಕೊಡುವ ಡಾಕ್ಟ್ರು ಇದ್ರೆ ಅದನ್ನು ಬಿಜೆಪಿಯವರಿಗೆ ಕೊಡಬೇಕೆಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 ನಗರದ ಹಳೆ ಪೊಲೀಸ್ ಠಾಣೆ ಎದುರು ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜನರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ, ಯೋಜನೆ ಮಾಡಿದ್ದಾರೆ. ಆದರೆ ಮೋದಿ ಏನು ಮಾಡಿದ್ದಾರೆ? 9 ತಿಂಗಳಿನಲ್ಲಿ ರೈಲ್ವೆ ಇಲಾಖೆಯಲ್ಲಿ ಮಾಡಿರುವ ಕೆಲಸ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ತಲುಪಿದೆ. ನಮ್ಮ ಕೆಲಸ ಕಾಣುತ್ತಿಲ್ಲ, ಇಎಸ್‌ಐ, ರೇಲ್ವೆ ವಿಭಾಗ, ಕೇಂದ್ರಿಯ ವಿಶ್ವವಿದ್ಯಾಲಯ, ವಿವಿಧ  ರೈಲು, 371 (ಜೆ) ಇಷ್ಟೆಲ್ಲ ಕೆಲಸ ಮಾಡಿಯೂ ಬಿಜೆಪಿಯವರು ಏನು ಮಾಡಿದಿರಿ ಅಂತ ಕೇಳುತ್ತಾರೆಂದು ಖರ್ಗೆ ವ್ಯಂಗ್ಯವಾಡಿದರು.
ದೇಶದಲ್ಲಿ ಏನು ತಾನೆ ಕೆಲಸ ಮಾಡಲು ಸಾಧ್ಯ: ಮೋದಿ ಮುಖ್ಯಮಂತ್ರಿಯಾಗಿ ತನ್ನ ರಾಜ್ಯದಲ್ಲಿಯೇ ಏನೂ ಕೆಲಸ ಮಾಡದೆ, ದೇಶದಲ್ಲಿ ಏನು ತಾನೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಖರ್ಗೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಪರಸ್ಪರ ಬೀದಿ ಕಚ್ಚಾಟ, ರಂಪಾಟ, ಭ್ರಷ್ಟಾಚಾರ ಮಾಡಿ, ಉಂಡು ತಿಂದು ಜೈಲಿಗೆ ಸೇರಿದರು. ಈಗ ನಮಗೆ ಅಧಿಕಾರ ಸಿಕ್ಕಾಗ ಹಲವು ಯೋಜನೆ ಜಾರಿಗೆ ತಂದಿದ್ದೇವೆಂದರು.  
  ಹೈ-ಕ ಪ್ರದೇಶಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದರಿಂದ ಈ ಭಾಗದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದರು. ಮಾಜಿ ಸಂಸದ ಇಕ್ಬಾಲ್ ಅಹ್ಮದ ಸರಡಗಿ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಡಾ.ಎಮ್.ಎ. ರಶೀದ, ಮುಖಂಡರಾದ ಡಿಸಿಸಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಗತಿಪರ ಹೆಜ್ಜೆ ಓದಿ ಚರ್ಚೆಗೆ ಬನ್ನಿ
ಚಿತ್ತಾಪುರ: 9 ತಿಂಗಳಲ್ಲಿ ಚಿತ್ತಾಪುರ ಮತಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾದ 260 ಕೋಟಿ  ವೆಚ್ಚದ ಕಾಮಗಾರಿ ವಿವರಗಳ ಬಗ್ಗೆ ಪ್ರಗತಿಪರ ಹೆಜ್ಜೆ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕ ಓದಿ ವಿರೋಧ ಪಕ್ಷದವರು ಇದರ ಬಗ್ಗೆ ಬಹಿರಂಗ ಚರ್ಚೆಗೆ ಬರಬಹುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
  ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಿರುವ ತಾವು ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರತಿಯೊಂದು ಗ್ರಾಮಕ್ಕೂ ರಸ್ತೆ, ನೀರು, ವಿದ್ಯುತ್, ಸೇರಿದಂತೆ, ವಿವಿಧ ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಭವನಗಳನ್ನು, ಕ್ರಿಡಾಂಗಣ, ಐಟಿಐ ಕಾಲೇಜ್ ಹೀಗೆ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಅನುದಾನವನ್ನು ತಂದಿರುವುದಾಗಿ ಹೇಳಿದರು. ಇದನ್ನು ಸಹಿಸದ ವಿರೋಧ ಪಕ್ಷದವರು ಆಧಾರ ರಹಿತ ಅರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.
 ಹಿಂದಿನ ಶಾಸಕರಾಗಿದ್ದ ವಾಲ್ಮೀಕಿನಾಯಕನ್ನು ಟೀಕಿಸಿದ ಪ್ರಿಯಾಂಕ್ 4 ವರ್ಷದ ಅವಧಿಯಲ್ಲಿ ತಮ್ಮ ವಾಹನದಲ್ಲಿ ಬುಟ್ಟಿ, ಸಲಕಿ, ಟೆಂಗು, ಊದಿನಕಡ್ಡಿ ಇಟ್ಟುಕೊಂಡು ತಿರುಗುತ್ತಿದ್ದ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅದನ್ನೇ ಅಡಿಗಲ್ಲು ಮಾಡಿ ಜನರಿಗೆ ಮೋಸ ಮಾಡಿರುವ ನಾಯಕರವರು. ತಮ್ಮ ಅವಧಿಯಲ್ಲಿ ಸುವರ್ಣ ಗ್ರಾಮ ಯೋಜನೆಗಳ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ದಾಖಲೆ ಸಹಿತ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದರು.
  ಕಳೆದ 5 ವರ್ಷಗಳಲ್ಲಿ ನೀರಿಕ್ಷೆಗೆ ಮೀರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿಯೇ ಅವರಿಗೆ ಶ್ರೀರಕ್ಷೆ. ಬಿಜೆಪಿ ಪಕ್ಷಕ್ಕೆ ತಮ್ಮದೇ ಪಕ್ಷದ ಮೇಲೆ ಭರವಸೆ ಇಲ್ಲ. ಅವರು ಮುಂದೆ ಬರುವುದು ಬಿಜೆಪಿ ಸರ್ಕಾರವಲ್ಲ, ಮೋದಿ ಸರ್ಕಾರ ಎಂದು ಮೋದಿ ಜಪ ಮಾಡುತ್ತಿದ್ದಾರೆ. ಇಲ್ಲಿ ಅವರ ಜಪ ನಡೆಯುವದಿಲ್ಲ ಎಂದರು.
108 ವಾಹನದಲ್ಲಿ ಹಣ ಸಾಗಿಸುವುದು ಬಿಜೆಪಿ ಸಂಸ್ಕೃತಿ: ಕಾಂಗ್ರೆಸ್ ಪಕ್ಷವು 108 ವಾಹನದಲ್ಲಿ ಹಣ ಸಾಗಿಸುವಂತಹ ಪಕ್ಷ ಅಲ್ಲ. ಅದು ಏನಿದ್ದರೂ ಜಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಮಾಡುವ ಕೆಲಸವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement