ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕ್ಷೇತ್ರದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ'

Rashmi Kasaragodu
Updated On : 3 Apr 2014, 1:54 am

ಆಳಂದ: ಆಡಳಿತದಲ್ಲಿ ಶಾಸಕ ಬಿ.ಆರ್. ಪಾಟೀಲರ ಹಸ್ತಕ್ಷೇಪ, ಅಧಿಕಾರ ದರ್ಪ, ಭ್ರಷ್ಟಾಚಾರದಿಂದ ಕ್ಷೇತ್ರದ ಅಭಿವೃ-ದ್ಧಿ ಸಂಪೂರ್ಣ ಕುಂಠಿತಗೊಂಡು ಜನ ಸಾಮಾನ್ಯರು ಕಂಗಾಲಾಗಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ವಾಗ್ದಾಳಿ ನಡೆಸಿದರು.
ಕಳೆದ ವಿಧಾನಸಭೆ ಚುನಾವಣೆ ಬಳಿಕ ಪ್ರಥಮ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರೀ ಬಾಯಿ ಮಾತಿನಲ್ಲೇ ಅಭಿವೃದ್ಧಿ ಮಾಡುವುದಾಗಿ ಜನರಿಗೆ ಮರಳು ಮಾಡಲು ಹೊರಟ್ಟಿದ್ದಾರೆ. 600 ಕೆರೆಗಳ ನಿರ್ಮಾಣಕ್ಕೆ ಅ ನುದಾನ ತರುವುದಾಗಿ ಹೇಳಿದ್ದಾರೆ. ಇದುವರೆಗೂ ಒಂದೂ ಕೆರೆ ಮಂಜೂರಾಗಿಲ್ಲ. ಸಿಎಂ ಸಿದ್ದರಾಮಯ್ಯನವರ ಆಪ್ತರೆಂದು ಕೆಲಸವೇ ಮಾಡಿಲ್ಲ ಯಾಕೆ, ಇವರು ಕೇವಲ ಪ್ರಸ್ತಾವನೆ ಶಾಸಕರಾಗಿದ್ದಾರೆ. ಅಭಿವೃದ್ಧಿ ಏನೂ ಆಗಿಲ್ಲ ಎಂದು ಛೇಡಿಸಿದರು.
ಕಾಮಗಾರಿಗೆ ಅನಗತ್ಯ ಅಡ್ಡಗಾಲು: ಸ್ವಂತ ಬಜೆಟ್ ತರದೆ ಎಲ್ಲವನ್ನೂ ನಾನೇ ಮಾಡಿದ್ದೇನೆ ಎನ್ನುವರು. ಹಿಂದಿನ ಅವಧಿಯಲ್ಲಿನ ಕೆಲಸಗಳನ್ನು ಗುತ್ತಿಗೆದಾರರು ಮಾಡದಂತೆ ಬಿಲ್ ಹಾಗೂ ಕಾಮಗಾರಿ ತಡೆಹಿಡಿದಿದ್ದಾರೆ. ಕಾಮಗಾರಿ ಕಳಪೆ ಆಗಿದ್ದರೆ ಪ್ರಶ್ನಿಸುವುದು ಬಿಟ್ಟು ಬೇರೊಬ್ಬರಿಗೆ ಟೆಂಡರ್ ಆಗಿದ್ದ ಮಾತ್ರಕ್ಕೆ ಕಾಮಗಾರಿ ಹಾಗೂ ಬಿಲ್ ತಡೆಹಿಡಿಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಜಿರೋಳಿ, ಮಟಕಿ ಕುಡಿವ ನೀರಿನ ಬಾವಿ, ಪೈಪ್ಲೈನ್ ಕೆಲಸ ಟೆಂಡರ್ ಆದ ಕಾಮಗಾರಿಯೂ ಆರು ತಿಂಗಳಿಂದ ತಡೆಹಿಡಿದಿದ್ದಾರೆ. ಹೀಗೆ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬೇಕಾದರೆ ಕಮೀಶನ್ ನೀಡಿದರೆ ಮಾತ್ರ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸದ್ದಾರೆ. ಈ ಕುರಿತು ಸಂಬಂಧಿಸಿದ ಆಯಾ ಮೇಲಾಧಿಕಾರಿಗಳಿಗೆ ದೂರಿದರೂ ಕ್ರಮ ಕೈಗೊಂಡಿಲ್ಲ ಎಂದು ಹರಿಹಾಯ್ದರು.
ನಿರ್ಲಕ್ಷ್ಯ: ಅಲ್ಪಸಂಖ್ಯಾರಿಗಾಗಿನ ಗಂಗಾ ಕಲ್ಯಾಣ ಯೋಜನೆಯ 14 ಬೋರ್ವೆಲ್ ಕೊರೆಸಿಲ್ಲ. ಗ್ರಾಪಂ ಆಶ್ರಯ ಮನೆ ಜಾಗೃತಿ ಸಮತಿ ಸಭೆ ಕರೆಯದೆ ತಮಗೆ ಬೇಕಾದ ಗ್ರಾಪಂಗಳಲ್ಲಿನ ಫಲಾನುಭವಿಗಳ ಸುಳ್ಳು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ 7 ಪಂಚಾಯಿತಿಗಳನ್ನು ಕಡೆಗಣಿಸಿದ್ದಾರೆ. ಪುರಸಭೆಯಲ್ಲಿ ಹಿಂದೆ ಆಯ್ಕೆ ಮಾಡಿದ ಮನೆಗಳ ಪಟ್ಟಿಗೆ ತಡೆಹಿಡಿಯುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement