ನೀತಿ ಸಂಹಿತೆ ಉಲ್ಲಂಘನೆ: ದೂರು
ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಐನೋಳಿ ಜಿಲ್ಲಾ ಪಂಚಾಯ್ತಿ ಸದಸ್ಯರು ಐನೋಳಿ ಗ್ರಾಮದ ಗಯೂಬ್ ಸಾಬ್ ದರ್ಗಾ ಹತ್ತಿರ ಇದಗಾ ಮೈದಾನ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ತಾಲೂಕ ಯುವ ಬಿಜೆಪಿ ಮುಖಂಡ ನ್ಯಾಯವಾದಿ ಶ್ರೀಮಂತ ಕಟ್ಟಮನಿ ಸಹಾಯಕ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಐನೋಳಿ ಜಿಪಂ ಸದಸ್ಯರು ಮಾಜಿ ಅಧ್ಯಕ್ಷ ದೀಪಕನಾಗ ಶಶಿಧರ ಪುಣ್ಯಶೆಟ್ಟಿ ಹಾಗೂ ಗ್ರಾಪಂ ಸದಸ್ಯರು ಸೇರಿಕೊಂಡು ಐನೋಳಿ ಗ್ರಾಮದಲ್ಲಿನ ಗಯೂಬ್ ಸಾಬ್ ದರ್ಗಾ ಹತ್ತಿರದಲ್ಲಿ ಇದಗಾ ಮೈದಾನ ಮತ್ತು ಕಾಂಪೌಂಡ್ ಕಾಮಗಾರಿಯ ಅಡಿಗಲ್ಲು ನೇರವೇರಿಸಿ ಅವರ ಸಾಮಾಜಿಕ ತಾಣದಲ್ಲಿ (ಫೇಸ್ಬುಕ್) ಉದ್ಘಾಟನೆ ಭಾವಚಿತ್ರಗಳನ್ನು ಹರಿದು ಬಿಟ್ಟಿದ್ದಾರೆ. ಇದು ಚುನಾವಣೆಯಲ್ಲಿ ಮತದಾರರ ಮನಮೊಲಿಸಲು ಮಾಡಿದ್ದಾರೆ. ಇದು ಸಂಪೂರ್ಣ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ಅವರಿಗೆ ತಾಲೂಕ ಬಿಜೆಪಿ ಯುವ ಮುಖಂಡ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ದೂರು ನೀಡಿ ಒತ್ತಾಯಿಸಿದ್ದಾರೆ.